ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಯಶಸ್ವಿ 25 ವರ್ಷ ಪೂರೈಸುತ್ತಿರುವ ಉದಯ ಟಿವಿ ಧಾರಾವಾಹಿಗಳಿಂದಲೇ ಮನೆಮಾತಾಗಿದೆ. ಒಂದಕ್ಕಿಂತ ಒಂದು ವಿಭಿನ್ನ ಕಥೆಗಳನ್ನು ಕನ್ನಡದ ವೀಕ್ಷಕರಿಗೆ ನೀಡಿದೆ. ಈ ಸಾಲಿನಲ್ಲಿ 'ಸೇವಂತಿ' ಧಾರಾವಾಹಿ ಕೂಡ ಒಂದು.
ಇಂದು 'ಸೇವಂತಿ' ವಿಶೇಷ ಸಂಚಿಕೆ! - ಸೇವಂತಿ ಧಾರವಾಹಿಯ ವಿಶೇಷ ಸಂಚಿಕೆ
ಸೇವಂತಿ ಧಾರಾವಾಹಿ ಸೋಮವಾರದಿಂದ ಶುಕ್ರವಾರ ರಾತ್ರಿ 7:30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.
ಸೇವಂತಿ
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೇವಂತಿ ಧಾರವಾಹಿಯ ವಿಶೇಷ ಸಂಚಿಕೆ ಪ್ರಸಾರವಾಗುತ್ತಿದೆ. ನಾಯಕ ಅರ್ಜುನ್ ಮತ್ತು ನಾಯಕಿ ಸೇವಂತಿ ಒಪ್ಪಂದದ ಮದುವೆಯಾಗಿ ಮನೆಗೆ ಬಂದಿರೋದು ಗೊತ್ತಿರೋ ವಿಷ್ಯ. ಅವರಿಂದಲೇ ವರಮಹಾಲಕ್ಷ್ಮೀ ಹಬ್ಬ ಮಾಡಿಸುವ ಯೋಚನೆ ಮನೆಯವರದ್ದು. ಗಂಡ ಹೆಂಡ್ತಿ ನಾಟಕೀಯವಾಗಿ ಪೂಜೆ ಮಾಡುತ್ತಾರೆ. ಇವರ ಬಾಳಲ್ಲಿ ಈ ಹಬ್ಬ ಹೊಸ ತಿರುವು ನೀಡಲಿದೆಯೇ ಎಂಬುದು ಕುತೂಹಲ.
ತಾರಾಬಳಗದಲ್ಲಿ ಶಿಶಿರ್ ಶಾಸ್ತ್ರಿ, ಪಲ್ಲವಿಗೌಡ, ಸಂಗೀತಾ, ಆಶಾಲತಾ ಮುಂತಾದವರಿದ್ದಾರೆ. ಸೇವಂತಿ ಧಾರಾವಾಹಿ ಸೋಮವಾರದಿಂದ ಶುಕ್ರವಾರ ರಾತ್ರಿ 7:30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.