ಮುಂಬೈ:ಖಾಸಗಿ ಮನೋರಂಜೆನ ವಾಹಿನಯ ಡ್ಯಾನ್ಸ್ ದಿವಾನೆ ರಿಯಾಲಿ ಶೋ ಎಪಿಸೋಡ್ ಚಿತ್ರೀಕರಣದ ಸೆಟ್‌ನಲ್ಲಿ ನಟ ಸೋನು ಸೂದ್ ಕಣ್ಣೀರು ಹಾಕಿದ ಘಟನೆ ನಡೆದಿದೆ.
ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಭಾರ್ತಿ ಎಂಬ ಮಹಿಳೆಯನ್ನು ಚಿಕಿತ್ಸೆಗಾಗಿ ನಾಗ್ಪುರದಿಂದ ಹೈದರಾಬಾದ್‌ಗೆ ವಿಮಾನದಲ್ಲಿ ಹೇಗೆ ಕರೆದೊಯ್ಯಲಾಯಿತು ಎಂಬದನ್ನು ನೃತ್ಯದ ಮೂಲಕ ಪ್ರದರ್ಶನ ನೀಡಲಾಯಿತು. ಇದನ್ನು ನೋಡಿದ ನಟ ಸೋನು ಸೂದ್ ಕಣ್ಣೀರು ಹಾಕಿದರು.
ಶ್ವಾಸಕೋಶಗಳನ್ನು ಕಳೆದುಕೊಂಡಿದ್ದ 25 ವರ್ಷದ ಯುವತಿ ಭಾರ್ತಿಯನ್ನು ಸೋನು ಸೂದ್ ಅವರ ಸಹಾಯದಿಂದ ನಾಗ್ಪುರದ ವೋಕ್ಹಾರ್ಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಗೆ ಶ್ವಾಸಕೋಶದ ವಿಶೇಷ ಚಿಕಿತ್ಸೆಯ ಅಗತ್ಯವಿದ್ದು, ಹೈದರಾಬಾದ್ನ ಅಪೊಲೋ ಆಸ್ಪತ್ರೆಯಲ್ಲಿ ಮಾತ್ರ ಈ ಚಿಕಿತ್ಸೆ ಕೊಡಿಸಲು ಏಪ್ರಿಲ್ನಲ್ಲಿ ಏರ್ ಲಿಫ್ಟ್ ಮಾಡಿದ್ದರು.
ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರೋಮೋ ಒಂದರಲ್ಲಿ, ಭಾರ್ತಿ ಅವರ ಕುಟುಂಬ ಸದಸ್ಯರು ಸೋನು ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ಅವರು ಅವನಿಗೆ ಧನ್ಯವಾದ ಹೇಳುತ್ತಿದ್ದಂತೆ ಆಕೆಯ ತಾಯಿ ಭಾವುಕರಾದರು. ಕುಟುಂಬದ ಮತ್ತೊಬ್ಬ ಸದಸ್ಯ, "ಸರ್ ಹುಮಾರೆ ಲಿಯೆ ಫರಿಶೆಟ್ ಹೈ" (ಅವರು ನಮಗೆ ದೇವತೆ) ಎಂದು ಹೇಳಿದ್ದು, ನಟನಲ್ಲಿ ಕಣ್ಣೀರು ತರಿಸುವಂತೆ ಮಾಡಿತು.