ಕರ್ನಾಟಕ

karnataka

ETV Bharat / sitara

ಪುಟ್ಟಕಂದನ ಆಗಮನದ ನಿರೀಕ್ಷೆಯಲ್ಲಿ ಕಿರುತೆರೆ ಜೋಡಿ - Anchor Shravant became father

ಕಿರುತೆರೆ ಜೋಡಿಗಳಾದ ರಾಧಿಕಾ ಹಾಗೂ ಶ್ರವಂತ್ ತಂದೆ-ತಾಯಿಗಳಾದ ಖುಷಿಯಲ್ಲಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಿದ್ದ ಈ ಜೋಡಿ, ಮನೆಗೆ ಹೊಸ ಅತಿಥಿ ಆಗಮನದ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

Anchor Shravant became father
ತಾಯಿಯಾಗುತ್ತಿರುವ ಖುಷಿಯಲ್ಲಿ ನಟಿ ರಾಧಿಕಾ

By

Published : Nov 9, 2020, 2:05 PM IST

ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಸೌಂದರ್ಯ ಆಗಿ ನಟಿಸಿದ್ದ ರಾಧಿಕಾ ಹಾಗೂ ಕಿರುತೆರೆ ನಟ, ನಿರೂಪಕ ಶ್ರವಂತ್ ಇದೇ ವರ್ಷ ಫೆಬ್ರವರಿ 13 ರಂದು ಮದುವೆಯಾಗಿದ್ದರು. ಸದ್ಯದಲ್ಲೇ ಇವರ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ. ರಾಧಿಕಾ ಗರ್ಭಿಣಿಯಾಗಲಿದ್ದು ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ.

ರಾಧಿಕಾ -ಶ್ರವಂತ್

ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಪತಿಯೊಂದಿಗೆ ಬೇಬಿ ಬಂಪ್​​ ಫೋಟೋ ಶೂಟ್ ಮಾಡಿಸಿಕೊಂಡಿರುವ ರಾಧಿಕಾ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಲಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಪುಟ್ಟ ಕಂದನ ಆಗಮನಕ್ಕೆ ಇಬ್ಬರೂ ಎದುರು ನೋಡುತ್ತಿದ್ದಾರೆ.

ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ ರಾಧಿಕಾ

ನೆಗೆಟಿವ್ ಪಾತ್ರಗಳ ಮೂಲಕವೇ ಕಿರುತೆರೆಯಲ್ಲಿ ಹೆಸರಾಗಿದ್ದ ರಾಧಿಕಾ, ಕೊನೆಯ ಬಾರಿ ನಟಿಸಿದ್ದು ಮಂಗಳ ಗೌರಿ ಮದುವೆಯಲ್ಲಿ. ಮತ್ತೊಂದು ಸರ್ಪ್ರೈಸ್​​​​ ಮೂಲಕ ನಿಮ್ಮ ಮುಂದೆ ಬರಲಿದ್ದೇನೆ ಎಂದು ಹೇಳಿದ ರಾಧಿಕಾ, ಇದೀಗ ಆ ಸರ್ಪ್ರೈಸ್​​​​ ಏನು ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಶ್ರವಂತ್ ಕಿರುತೆರೆ ನಟ ಮಾತ್ರವಲ್ಲ ನಿರೂಪಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.

ABOUT THE AUTHOR

...view details