ಕರ್ನಾಟಕ

karnataka

ETV Bharat / sitara

ಕಿರುತೆರೆ ನಟನ ಹೆಸರು ದುರ್ಬಳಕೆ... ಸೈಬರ್ ಕ್ರೈಂ ಪೊಲೀಸರಿಗೆ ದೂರು - Small screen actor RK Chandan

'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕನಾಗಿ ಹೆಸರು ಮಾಡಿದ್ದ ನಟ ಚಂದನ್ ಹೆಸರಿನಲ್ಲಿ ಕೆಲವರು ನಕಲಿ ಫೇಸ್​​​ಬುಕ್ ಖಾತೆ ತೆರೆದಿದ್ದು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಚಂದನ್ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Small screen actor RK Chandan
ಕಿರುತೆರೆ ನಟ ಚಂದನ್

By

Published : Jul 4, 2020, 9:56 AM IST

Updated : Jul 4, 2020, 10:36 AM IST

ಸೆಲಬ್ರಿಟಿಗಳ ಹೆಸರನ್ನು, ಪೋಟೋಗಳನ್ನು ಬಳಸಿಕೊಂಡು ಮೋಸ ಮಾಡುವ ಕೆಲಸ ಇಂದು ನಿನ್ನೆಯದಲ್ಲ. ಇಂತ ದುಷ್ಕೃತ್ಯ ಎಂದಿನಿಂದಲೋ ನಡೆಯುತ್ತಿದೆ. ಇದೀಗ ಕಿರುತೆರೆ ನಟನೊಬ್ಬರ ನಕಲಿ ಸೋಷಿಯಲ್ ಅಕೌಂಟ್ ಸೃಷ್ಟಿಸಿ ಆ ಮೂಲಕ ಕೆಲವರು ನಟನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ನಕಲಿ ಫೇಸ್​​ಬುಕ್​ ಖಾತೆಗಳ ಬಗ್ಗೆ ಚಂದನ್ ಸ್ಪಷ್ಟನೆ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕ ತೇಜಸ್ವಿಯಾಗಿ ಅಭಿನಯಿಸಿದ್ದ ಆರ್​​.ಕೆ. ಚಂದನ್ ಅವರು ಮೊದಲ ಧಾರಾವಾಹಿಯಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಚಂದನ್ ಹೆಸರಿನಲ್ಲಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಫ್ಯಾನ್ ಪೇಜ್​​​​​​​​​​​​ಗಳಿವೆ. ಆ ಫ್ಯಾನ್ ಪೇಜಿನ ಮೂಲಕ ಕೆಲವರು ಚಂದನ್​ ಹೆಸರಿನಲ್ಲಿ ಯುವತಿಯವರಿಗೆ ಮೋಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕಿರುತೆರೆ ನಟ ಚಂದನ್

ಈ ವಿಚಾರವನ್ನು ಸ್ವತ: ಚಂದನ್ ಅವರೇ ಹೇಳಿಕೊಂಡಿದ್ದಾರೆ. ಆರ್​​​​​.ಕೆ. ಚಂದನ್ ಹೆಸರಿನಲ್ಲಿ ಒಂದಷ್ಟು ನಕಲಿ ಫೇಸ್​​ಬುಕ್​​ ಖಾತೆಗಳು ತೆರೆಯಲ್ಪಟ್ಟಿದೆ. ಮಾತ್ರವಲ್ಲ ಆ ನಕಲಿ ಖಾತೆಯ ಮೂಲಕ ಹೆಣ್ಣು ಮಕ್ಕಳಿಗೆ ಅಸಭ್ಯ ಸಂದೇಶ ಕಳಿಸಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ. ನಿಜ ಹೇಳಬೇಕೆಂದರೆ ನಾನು ಫೇಸ್​​ಬುಕ್ ಬಳಸುತ್ತಿಲ್ಲ. ನನ್ನ ಹೆಸರಿನಲ್ಲಿ ಇರುವ ಫೇಸ್​​ಬುಕ್ ಖಾತೆಗಳು ನನ್ನದಲ್ಲ. ಈಗಾಗಲೇ ಈ ಫೇಸ್​​​​ಬುಕ್​​​​​​​​​​ ಅಕೌಂಟ್​​​ನಿಂದ ಸಾಕಷ್ಟು ಜನರು ಮೋಸ ಹೋಗಿದ್ದಾರೆ. ಈ ಬಗ್ಗೆ ನಾನು ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ.

'ಮಾಂಗಲ್ಯಂ ತಂತು ನಾನೇನಾ' ಖ್ಯಾತಿಯ ನಟ ಚಂದನ್

ನಾನು ಇನ್ಸ್​​​ಟಾಗ್ರಾಮ್ ಹಾಗೂ ಟ್ವಿಟ್ಟರ್​ ಮಾತ್ರ ಬಳಸುತ್ತಿದ್ದು ನನ್ನ ಹೆಸರಿನಿಂದ ಯಾವುದಾದರೂ ಸಂದೇಶಗಳು ಬಂದರೆ ದಯವಿಟ್ಟು ಅದರನ್ನು ಪರಿಶೀಲಿಸಿ ಎಂದು ಚಂದನ್ ಮನವಿ ಮಾಡಿದ್ದಾರೆ.

Last Updated : Jul 4, 2020, 10:36 AM IST

ABOUT THE AUTHOR

...view details