ಟ್ರಿಪ್ ಹೋಗೋದು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಅದರಲ್ಲೂ ಅವಕಾಶ ಸಿಕ್ಕರೆ ತಮ್ಮ ಇಷ್ಟದ ಗೆಳೆಯರೊಂದಿಗೆ ಟ್ರಿಪ್ ಹೋಗುವ ಅವಕಾಶವನ್ನು ಯಾರೂ ಕೂಡಾ ಮಿಸ್ ಮಾಡಿಕೊಳ್ಳುವುದಿಲ್ಲ.
ಕರ್ನಾಟಕದ ಖ್ಯಾತ ಸ್ಥಳಕ್ಕೆ ಟ್ರಿಪ್ ಹೋಗಿ ಬಂದ ಕಿರುತೆರೆ ಕಲಾವಿದರು - Small screen actor chandan gowda
ಕಿರುತೆರೆ ಕಲಾವಿದರಾದ ಕವಿತಾ ಗೌಡ, ಚಂದನ್ ಕುಮಾರ್ ಹಾಗೂ ದಿಲೀಪ್ ಶೆಟ್ಟಿ ತುಮಕೂರಿನ ಶಿವಗಂಗೆ ಬೆಟ್ಟಕ್ಕೆ ಟ್ರಿಪ್ ಹೋಗಿ ಬಂದಿದ್ದು ಈ ಸಂತೋಷದ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಈ ಕೊರೊನಾ ಕಾರಣದಿಂದಾಗಿ ಈ ವರ್ಷ ಟ್ರಿಪ್ ಹೋಗುವುದು ಬಿಡಿ, ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟವಾಗಿದೆ. ಈ ಸಮಯದಲ್ಲೂ ಕಿರುತೆರೆ ನಟ-ನಟಿಯರು ಟ್ರಿಪ್ ಹೋಗಿ ಬಂದಿದ್ದಾರೆ. ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದಾರೆ. ದಿಲೀಪ್ ಶೆಟ್ಟಿ, ಚಂದನ್ ಕುಮಾರ್, ಕವಿತಾ ಗೌಡ ಹಾಗೂ ಇವರ ಇನ್ನಿಬರು ಸ್ನೇಹಿತರು ಒಟ್ಟಿಗೆ ಸೇರಿ ಟ್ರಿಪ್ ಎಂಜಾಯ್ ಮಾಡಿ ಬಂದಿದ್ದಾರೆ. ಇವರೆಲ್ಲಾ ತುಮಕೂರಿನ ಶಿವಗಂಗೆಗೆ ಹೋಗಿ ಸುಂದರ ಪ್ರಕೃತಿಯನ್ನು ಎಂಜಾಯ್ ಮಾಡಿ, ದೇವರ ದರ್ಶನ ಪಡೆದು ಬಂದಿದ್ದಾರೆ. ಈ ಸಂತೋಷದ ಕ್ಷಣವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಂದನ್ ಕುಮಾರ್ ಮತ್ತು ಕವಿತಾ, 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಜೋಡಿಯಾಗಿ ಅಭಿನಯಿಸಿದ್ದರೆ, ದಿಲೀಪ್ ಹಾಗೂ ಕವಿತಾ ಗೌಡ 'ವಿದ್ಯಾ ವಿನಾಯಕ' ದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಕವಿತಾ ಅವರ ಜನ್ಮದಿನವಿದ್ದು, ಚಂದನ್ ಹಾಗೂ ದಿಲೀಪ್ ರಾತ್ರಿ 12 ಗಂಟೆಗೆ ಕವಿತಾ ಮನೆಗೆ ಕೇಕ್ ಕೊಂಡೊಯ್ದು ಸರ್ಪ್ರೈಸ್ ನೀಡಿದ್ದರು. ಕೆಲವು ದಿನಗಳ ಹಿಂದೆ ಚಂದನ್ ಹಾಗೂ ಕವಿತಾ ಗೌಡ ವಿಡಿಯೋ ಕಾಲ್ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು.