ನಟನೆಯಿಂದ ಮಾತ್ರವಲ್ಲ ತಮ್ಮ ಸೌಂದರ್ಯದಿಂದಲೂ ಕಿರುತೆರೆಪ್ರಿಯರ ಮನ ಸೆಳೆಯುತ್ತಿರುವ ಚೆಲುವೆ ಕಾವ್ಯಗೌಡ, ಕಳೆದ ವರ್ಷ ಮುಕ್ತಾಯಗೊಂಡ ಕಲರ್ಸ್ ಕನ್ನಡದ ರಾಧಾ ರಮಣ ಧಾರಾವಾಹಿಯಲ್ಲಿ ರಾಧಾ ಮಿಸ್ ಆಗಿ ಎಲ್ಲರ ಗಮನ ಸೆಳೆದವರು.
ನನ್ನ ಅಕ್ಕನೇ ನನಗೆ ಸ್ಪೂರ್ತಿ...ಕಿರುತೆರೆ ನಟಿ ಕಾವ್ಯಗೌಡ - Radharamana fame Kavyagowda
ಕಿರುತೆರೆ ನಟಿ ಕಾವ್ಯಗೌಡ ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಂಪ್ರದಾಯಬದ್ಧವಾಗಿ ಸೀರೆ ಉಟ್ಟು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನಾನು ಏನೇ ಮಾಡಿದರೂ ಅದಕ್ಕೆ ನನ್ನ ಅಕ್ಕನೇ ಸ್ಪೂರ್ತಿ ಎನ್ನುತ್ತಾರೆ ರಾಧಾ ಮಿಸ್.
ಆಗ್ಗಾಗ್ಗೆ ಸುಂದರ ಫೋಟೋಶೂಟ್ ಮಾಡಿಸುತ್ತಾ ಗಮನ ಸೆಳೆಯುತ್ತಿದ್ದ ಕಾವ್ಯಗೌಡ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಕೂಡಾ ಹೊಸ ಫೋಟೋಶೂಟ್ ಮಾಡಿಸಿದ್ದು ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಂಪ್ರದಾಯವಾಗಿ ಸೀರೆ ಉಟ್ಟು ಅಕ್ಕ ಹಾಗೂ ಅಕ್ಕನ ಮಗಳೊಂದಿಗೆ ಫೋಟೋಶೂಟ್ ಮಾಡಿಸಿರುವ ಕಾವ್ಯಗೌಡ 'ನಾನು ನನ್ನದೇ ಆದ ಶೈಲಿಯನ್ನು ಹೊಂದಿದ್ದೇನೆ. ಅದು ಎಲ್ಲರಿಗಿಂತ ಭಿನ್ನವಾಗಿರುತ್ತದೆ. ಅದಕ್ಕೆಲ್ಲಾ ನನ್ನ ಅಕ್ಕನೇ ನನಗೆ ಸ್ಫೂರ್ತಿ' ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ ಕೊರೊನಾದಂತ ಕಷ್ಟದ ಪರಿಸ್ಥಿತಿಯಲ್ಲಿ ಜನರ ಅವಶ್ಯಕತೆಗಳ ಕುರಿತು ದನಿ ಎತ್ತಿರುವ ಕಾವ್ಯ, ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ನಿಮಗೆ ಅನುಕೂಲವಿದ್ದರೆ ಮನೆಯಲ್ಲೇ ಇರಿ. ಹೊರಗೆ ತೆರಳುವಾಗ ಬಹಳ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ವರ್ತಿಸಿ. ಆದರೆ ಇನ್ನೂ ಕೆಲವರಿಗೆ ಮನೆಯಿಂದ ಹೊರ ಹೋಗಿ ದುಡಿಯುವ ಅವಶ್ಯಕತೆ ಇದ್ದೇ ಇರುತ್ತದೆ ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದೆ ಎಂದು ಹೇಳಿದ್ದಾರೆ.