ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿ ಆಗಿ ಅಭಿನಯಿಸುತ್ತಿರುವ ಅಶ್ವಿನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡುವ ಮೂಲಕ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಸೋಷಿಯಲ್ ಮೀಡಿಯಾ ಮೂಲಕ ಕಿರುತೆರೆಪ್ರಿಯರಿಗೆ ಕೃತಜ್ಞತೆ ಅರ್ಪಿಸಿದ ಮುದ್ದುಲಕ್ಷ್ಮಿ - Ashwini thanked her fans
ಮುದ್ದುಲಕ್ಷ್ಮಿ ಅಲಿಯಾಸ್ ಅಶ್ವಿನಿ ಸೋಷಿಯಲ್ ಮೀಡಿಯಾ ಮುಖಾಂತರ ಕಿರುತೆರೆಪ್ರಿಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದವರಿಗೆ ಅವರು ಕೃತಜ್ಞತೆ ಅರ್ಪಿಸಿದ್ದಾರೆ.

"ಮೊದಲಿಗೆ ನನ್ನ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಧನ್ಯವಾದ ಸಲ್ಲಿಸುತ್ತೇನೆ. ಇದು ನನ್ನ ಮೊದಲ ಕೃತಜ್ಞತಾ ಪತ್ರವಾಗಿದೆ. ಘಟನೆಗಳು, ಆಯ್ಕೆಗಳು, ಪಾಠಗಳು ಹಾಗೂ ಜನರು ತೋರಿಸಿದ ಪ್ರೀತಿಯಿಂದ ನಾನು ನಾನಾಗಿರಲು ಕಾರಣವಾಯಿತು. ಮುಖ್ಯವಾದ ವಿಚಾರವೆಂದರೆ ಅನುಭವಗಳ ಉಡುಗೊರೆ ನನ್ನನ್ನು ಉತ್ತಮ ಮನುಷ್ಯಳನ್ನಾಗಿ ಮಾಡಿತು" ಎಂದು ಬರೆದುಕೊಂಡಿದ್ದಾರೆ ಅಶ್ವಿನಿ.
"ನನ್ನ ಕಥೆಯನ್ನು ಆಸಕ್ತಿಕರವನ್ನಾಗಿ ಮಾಡಿದ ಪ್ರತಿಯೊಬ್ಬರನ್ನೂ ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ. ಜೀವನ ಎನ್ನುವುದು ಒಂದು ಪಯಣ. ಇಲ್ಲಿ ತಿರುವು ಬಂದಾಗ ಜನರು ಸಂತೋಷ ಪಡೆಯಲು ತಮ್ಮದೇ ಆದ ದಾರಿಯಲ್ಲಿ ತೆರಳಲು ಬಯಸುತ್ತಾರೆ. ಮತ್ತು ಈ ಹಾದಿಯಲ್ಲಿ ಹಲವು ಅನುಭವಗಳ ವಿನಿಮಯ ಆಗುತ್ತದೆ. ಇದು ಕೇಳುಗರ ದೃಷ್ಟಿಕೋನಗಳಿಗೆ ಅನುಗುಣವಾಗಿ ಭಿನ್ನವಾಗಿರಬಹುದು. ದೃಷ್ಟಿಕೋನಗಳು ಏನೇ ಇರಬಹುದು ಆದರೆ ಕೊನೆಯಲ್ಲಿ ನಾವು ಹಂಬಲಿಸುವುದು ಸುಖಾಂತ್ಯ ತಾನೇ...? ಪದಗಳು ಹಾಗೂ ಕ್ರಿಯೆಗಳ ಮೂಲಕ ಎಲ್ಲಾ ಶಕ್ತಿ ವಿನಿಮಯವಾಗುತ್ತದೆ. ನಾನು ನಿಮ್ಮಲ್ಲರಿಗೂ ಋಣಿಯಾಗಿದ್ದೇನೆ. ನಿಮ್ಮೆಲ್ಲಾ ಒಳ್ಳೆ ಕಾರ್ಯಗಳು ಆಶೀರ್ವಾದ ಆಗಿ ನಿಮ್ಮ ಬಳಿ ಬರಲಿ" ಎಂದು ಕಿರುತೆರೆಪ್ರಿಯರಿಗೆ ಕೃತಜ್ಞತೆ ಅರ್ಪಿಸಿದ್ದಾರೆ ಮುದ್ದುಲಕ್ಷ್ಮಿ.