'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಕುಮುದಾ ಆಗಿ ಅಭಿನಯಿಸಿದ ನಟಿ ಅನಿಕಾ ಸಿಂಧ್ಯಾ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಒಂದು ಪೋಸ್ಟ್ ಹಾಕಿದ್ದು ಇದನ್ನು ನೋಡಿದ ನೆಟಿಜನ್ಸ್ ಅನಿಕಾಗೆ ಶುಭಾಶಯ ಕೋರಿದ್ಧಾರೆ. ಆದರೆ ನಂತರ ಅವರಿಗೆ ನಿಜ ಏನು ಅಂತ ತಿಳಿದಿದೆ.
ಕಿರುತೆರೆ ನಟಿ ಅನಿಕಾ ಸಿಂಧ್ಯಾ ನಟಿ ಅನಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ 'In a Rationshop'ಎಂದು ಬರೆದುಕೊಂಡಿದ್ದಾರೆ. ಇದನ್ನು ಸರಿಯಾಗಿ ಓದದ ಜನರು ಆ ಪದವನ್ನು 'in a Relationship' ಎಂದು ತಪ್ಪು ತಿಳಿದುಕೊಂಡು ಅನಿಕಾಗೆ ಒಬ್ಬರಾದ ಮೇಲೊಬ್ಬರು ಶುಭ ಕೋರಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲ ಈ ನಟಿ ಎಂಗೇಜ್ ಆಗಿದ್ದಾರೆ ಎಂದು ಖುಷಿಪಟ್ಟಿದ್ದಾರೆ.
ಅನಿಕಾ ಸಿಂಧ್ಯಾ ಫೇಸ್ಬುಕ್ ಪೋಸ್ಟ್ ಆದರೆ ಅನಿಕಾ ತಮಗೆ ಶುಭ ಕೋರಿದವರಿಗೆಲ್ಲಾ ಆ ವಾಕ್ಯವನ್ನು ಮತ್ತೊಮ್ಮೆ ಸರಿಯಾಗಿ ಓದಲು ಹೇಳಿದ್ದಾರೆ. ಆಗಲೇ ಎಲ್ಲರಿಗೂ ತಿಳಿದದ್ದು ಅದು ರಿಲೇಷನ್ ಶಿಪ್ ಅಲ್ಲ, ರೇಷನ್ ಶಾಪ್ ಅಂತ. ಲಾಕ್ ಡೌನ್ ಸಮಯದಲ್ಲಿ ಟೆನ್ಷನ್ನಲ್ಲಿರುವ ಜನರನ್ನು ಬಕ್ರಾ ಮಾಡಿದ್ದಲ್ಲದೆ, ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ ಅನಿಕಾ.
'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಅನಿಕಾ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಕುಮುದಾ ಆಗಿ ಹೆಸರು ಮಾಡಿರುವ ಅನಿಕಾ ಸಿಂಧ್ಯಾ ನಂತರ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕ ವಿಜಯ್ ಸೂರ್ಯ ಅಕ್ಕನಾಗಿ ಕೂಡಾ ನಟಿಸಿದ್ದರು.