ಕರ್ನಾಟಕ

karnataka

ETV Bharat / sitara

ಈ ವರ್ಷ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಕಲಾವಿದರು ಇವರು - ನೀರೆ ಸಿನಿಮಾದಲ್ಲಿ ನಟಿಸುತ್ತಿರುವ ಸಮೀಕ್ಷಾ

ಎಷ್ಟೋ ನಟ-ನಟಿಯರು ಹಿರಿತೆರೆಯಿಂದ ಕಿರುತೆರೆಗೆ ಬಂದಿದ್ದಾರೆ. ಅದೇ ರೀತಿ ಕಿರುತೆರೆ ನಟ-ನಟಿಯರು ಕೂಡಾ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಈ ವರ್ಷ ಕೂಡಾ ಕೆಲವು ಕಿರುತೆರೆ ನಟ-ನಟಿಯರು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಯಾವ ಕಿರುತೆರೆ ನಕ್ಷತ್ರಗಳು ಬೆಳ್ಳಿತೆರೆಯಲ್ಲಿ ಮಿಂಚಿವೆ ಎಂಬುದರ ಬಗ್ಗೆ ಚಿಕ್ಕ ಮಾಹಿತಿ.

Small screen actors
ಕಿರುತೆರೆ ಕಲಾವಿದರು

By

Published : Dec 27, 2019, 7:03 PM IST

ಸಮೀಕ್ಷಾ

ಸಮೀಕ್ಷಾ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್​​​​ನಲ್ಲಿ ನಟಿಸಿರುವ ಶನಾಯ ಅಲಿಯಾಸ್ ಸಮೀಕ್ಷಾ 'ನೀರೆ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಗಗನ್ ಚಿನ್ನಪ್ಪ

ಗಗನ್ ಚಿನ್ನಪ್ಪ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕ ಇನ್ಸ್​​​ಪೆಕ್ಟರ್​​​​​ ರಾಜೀವನಾಗಿ ನಟಿಸುತ್ತಿರುವ ಕೊಡಗಿನ ಕುವರ ಗಗನ್ ಚಿನ್ನಪ್ಪ ಅವರು 'ಅಲೆಗ್ಸಾಂಡರ್' ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.

ಸುಪ್ರಿತಾ ಸತ್ಯನಾರಾಯಣ

ಸುಪ್ರಿತಾ ಸತ್ಯನಾರಾಯಣ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾವಲ್ಲಭ' ಧಾರಾವಾಹಿಯಲ್ಲಿ ನಾಯಕಿ ಮೈಥಿಲಿ ಅಲಿಯಾಸ್ ಗುಬ್ಬಿಯಾಗಿ ನಟಿಸಿ ಮನೆ ಮಾತಾಗಿರುವ ಸುಪ್ರಿತಾ ಸತ್ಯನಾರಾಯಣ ಅವರು 'ರಹದಾರಿ' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ.

ಚಂದು ಗೌಡ

ಚಂದು ಗೌಡ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ನಾಯಕ ಚಂದು ಆಗಿ ನಟಿಸುತ್ತಿರುವ ಚಂದು ಗೌಡ ಅವರು ಕೂಡಾ ಬೆಳ್ಳಿತೆರೆಗೆ ಬಂದಿದ್ದಾರೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದಲ್ಲಿ ಅವರು ನಟಿಸಿದ್ದಾರೆ.

ರಾಧಿಕಾ ರಾವ್

ರಾಧಿಕಾ ರಾವ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಾ ಆಗಿ ಮಿಂಚುತ್ತಿರುವ ರಾಧಿಕಾ ರಾವ್ ಕೂಡಾ 'ಲುಂಗಿ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ದೀಕ್ಷಿತ್ ಶೆಟ್ಟಿ

ದೀಕ್ಷಿತ್ ಶೆಟ್ಟಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಮನೆ ಮಾತಾಗಿರುವ ಕುಂದಾಪುರದ ಕುವರ ದೀಕ್ಷಿತ್ ಶೆಟ್ಟಿ 'ದಿಯಾ' ಸಿನಿಮಾದಲ್ಲಿ ನಾಯಕ ಆಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಜಿಗಿದಿದ್ದಾರೆ.

For All Latest Updates

ABOUT THE AUTHOR

...view details