ಚಂದನವನದಲ್ಲಿ ಮಿಂಚುತ್ತಿರುವ ನಟರ ಪೈಕಿ ಹೆಚ್ಚಿನವರು ಕಿರುತೆರೆಯಿಂದಲೇ ನಟನಾ ಪಯಣ ಆರಂಭಿಸಿದವರು. ರಮೇಶ್ ಅರವಿಂದ್ 'ಪರಿಚಯ' ಧಾರಾವಾಹಿಯಲ್ಲಿ, ಕಿಚ್ಚ ಸುದೀಪ್ 'ಪ್ರೇಮದ ಕಾದಂಬರಿ' ಧಾರಾವಾಹಿಯಲ್ಲಿ, ಚಾಲೆಂಜಿಗ್ ಸ್ಟಾರ್ ದರ್ಶನ್ 'ಅಂಬಿಕಾ' ಧಾರಾವಾಹಿಯಲ್ಲಿ ಅಭಿನಯಿಸಿದ್ದರು.
ಇವರೊಂದಿಗೆ 'ಚಂದ್ರಿಕಾ' ಧಾರಾವಾಹಿಯಲ್ಲಿ ಶ್ರೀನಗರ ಕಿಟ್ಟಿ, 'ಪಾಪಾ ಪಾಂಡು'ವಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಂಕಿಂಗ್ ಸ್ಟಾರ್ ಯಶ್ 'ನಂದಗೋಕುಲ' ಮತ್ತು 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಕರಿಯರ್ ಆರಂಭಿಸಿದರು. ಇದೀಗ ಅವರ ಹಾದಿಯಲ್ಲಿಯೇ ಒಂದಷ್ಟು ಕಿರುತೆರೆ ಕಲಾವಿದರು ಹಿರಿತೆರೆಗೆ ಕಾಲಿಟ್ಟಿದ್ದಾರೆ.
ಡಾರ್ಲಿಂಗ್ ಕೃಷ್ಣ
ಲವ್ ಮಾಕ್ಟೇಲ್ ಸಿನಿಮಾ ಮೂಲಕ ಚಂದನವನದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ ಡಾರ್ಲಿಂಗ್ ಕೃಷ್ಣ ಕಿರುತೆರೆ ಮೂಲಕ ನಟನಾ ಪಯಣ ಆರಂಭಿಸಿದವರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಾಯಕ ಕೃಷ್ಣನಾಗಿ ನಟಿಸಿದ್ದರು. ಕೃಷ್ಣ ಮತ್ತೆ ಮುಖ ಮಾಡಿದ್ದು ಹಿರಿತೆರೆಯತ್ತ. 'ಮದರಂಗಿ' ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ಕೃಷ್ಣ ನಂತರ ನಮ್ ದುನಿಯಾ ನಮ್ ಸ್ಟೈಲ್, ಜಾಲಿ ಬಾರು ಮತ್ತು ಪೋಲಿ ಗೆಳೆಯರು, ಚಾರ್ಲಿ, ಜಾನ್ ಜಾನಿ ಜನಾರ್ಧನ್, ಹುಚ್ಚ 2, ಲವ್ ಮಾಕ್ಟೇಲ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ವಿಜಯ್ ಸೂರ್ಯ
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಷ್ಟಕಾಮ್ಯ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ವಿಜಯ್ ಸೂರ್ಯ ಕಿರುತೆರೆ ವೀಕ್ಷಕರ ಪಾಲಿನ ಪ್ರೀತಿಯ ನಟ. 'ಅಗ್ನಿಸಾಕ್ಷಿ' ಧಾರಾವಾಹಿಯ ಸಿದ್ಧಾರ್ಥ್ ಆಗಿ 7 ವರ್ಷಗಳಿಂದ ವೀಕ್ಷಕರ ಮನ ಸೆಳೆದ ವಿಜಯ್ ಸೂರ್ಯ ಇದೀಗ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ನಟಿಸುತ್ತಿದ್ದಾರೆ. ಕದ್ದುಮುಚ್ಚಿ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಬಂದ ವಿಜಯ್ ಸೂರ್ಯ ನಂತರ ಇಷ್ಟಕಾಮ್ಯ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಚಂದನ್ ಕುಮಾರ್