ಸೆಲಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಸಿನಿಮಾ ನಟ-ನಟಿಯರ ಖಾತೆ ಹ್ಯಾಕ್ ಆಗುತ್ತಿತ್ತು. ಇದೀಗ ಕಿರುತೆರೆ ನಟ-ನಟಿಯರ ಖಾತೆ ಕೂಡಾ ಹ್ಯಾಕ್ ಆಗಲು ಆರಂಭವಾಗಿದೆ.
ಇತ್ತೀಚೆಗೆ 'ಗಟ್ಟಿಮೇಳ' ಆರತಿ ಖ್ಯಾತಿಯ ಅಶ್ವಿನಿ, 'ಅಗ್ನಿಸಾಕ್ಷಿ' ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ, ಅಂಜಲಿ ಪಾತ್ರಧಾರಿ ಸುಕೃತಾ ನಾಗ್ ಅವರ ಇನ್ಸ್ಟಾಗ್ರಾಮ್ ಅಕೌಂಟ್ಗಳು ಹ್ಯಾಕ್ ಆಗಿತ್ತು. ಆದರೆ ಈ ಸಮಸ್ಯೆ ಇನ್ನೂ ನಿಂತಿಲ್ಲ. 'ನಾಗಿಣಿ' ಧಾರಾವಾಹಿ, ಬಿಗ್ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರ ಇನ್ಸ್ಟಾಗ್ರಾಮ್ ಖಾತೆ ಕೂಡಾ ಹ್ಯಾಕ್ ಆಗಿದೆ. ಈ ವಿಚಾರವನ್ನು ಸ್ವತಃ ದೀಪಿಕಾ ಅವರೇ ಹೇಳಿಕೊಂಡಿದ್ದಾರೆ.
ನನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ. ನನ್ನೊಂದಿಗೆ ಚಂದನ್ ಆಚಾರ್ ಅವರ ಖಾತೆಯನ್ನು ಕೂಡಾ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಮಾಡಲಾದ ಚಂದನ್ ಆಚಾರ್ ಪ್ರೊಫೈಲ್ನಿಂದ ನನಗೆ ಮೆಸೇಜ್ ಕೂಡಾ ಮಾಡಲಾಗಿದೆ. ಅಲ್ಲದೆ, ಚಂದನ್ ಅವರ ಖಾತೆಯನ್ನು ಹ್ಯಾಕರ್ಸ್ಗಳು ಇನ್ಸ್ಟಾಗ್ರಾಮ್ ಇನ್ ಫೋ ಕಾಪಿರೈಟ್ ಎಂದು ಬದಲಾಯಿಸಿದ್ದಾರೆ. ಆದ್ದರಿಂದ ಎಲ್ಲರೂ ಜಾಗೃತರಾಗಿರಿ. ಯಾರಾದರೂ ನಿಮ್ಮ ಬಗ್ಗೆ ಮಾಹಿತಿ ಕೇಳಿದರೆ ನೀಡಬೇಡಿ ಎಂದು ಎಚ್ಚರಿಸಿದ್ದಾರೆ.
ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಇನ್ಸ್ಟಾಗ್ರಾಮ್ ಖಾತೆ ಕೂಡಾ ಹ್ಯಾಕ್ ಆಗಬೇಕಿದ್ದು ಶ್ವೇತಾ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಈ ಬಗ್ಗೆ ಪೋಸ್ಟ್ ಹಾಕಿರುವ ಶ್ವೇತಾ ಎಲ್ಲರೂ ಜಾಗರೂಕರಾಗಿರಿ ಯಾರಿಗಾದರೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡುವಾಗ ಬಹಳ ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡಿದ್ಧಾರೆ.