ಟಿಕ್ಟಾಕ್, ಯುಸಿ ಬ್ರೌಸರ್, ಷೇರ್ ಇಟ್, ಕ್ಯಾಮ್ ಸ್ಕ್ಯಾನರ್ ಸೇರಿದಂತೆ ಸುಮಾರು 59 ಚೀನಾ ಮೊಬೈಲ್ ಆ್ಯಪ್ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವುದು ತಿಳಿದ ವಿಚಾರ. ಅದರಲ್ಲಿ ಟಿಕ್ಟಾಕ್ ಬ್ಯಾನ್ ಮಾಡಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿರುವುದು ಬಿಟ್ಟರೆ ಬಹುತೇಕ ಎಲ್ಲರೂ ಆ್ಯಪ್ಗಳು ಬ್ಯಾನ್ ಆಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಟಿಕ್ಟಾಕ್ ನಿಷೇಧದ ಬಗ್ಗೆ ಕಿರುತೆರೆ ನಟ ಪವನ್ ಕುಮಾರ್ ಹೇಳಿದ್ದೇನು...?
ಇಷ್ಟು ದಿನ ಟಿಕ್ಟಾಕ್ಗೆ ಅಡಿಕ್ಟ್ ಆಗಿದ್ದ ಯುವಜನತೆ ಇನ್ನು ಮುಂದೆ ತಮ್ಮ ಸಮಯವನ್ನು ಒಳ್ಳೆ ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದು. ಪ್ರಧಾನಿ ಮೋದಿ ಈ ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿ ಒಳ್ಳೆ ಕೆಲಸ ಮಾಡಿದರು ಎಂದು ಕಿರುತೆರೆ ನಟ ಪವನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಿರುತೆರೆ ನಟ ಪವನ್ ಕುಮಾರ್ ಕೂಡಾ ಆ್ಯಪ್ ಬ್ಯಾನ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ಶಿವಂ ಪಾತ್ರದಲ್ಲಿ ನಟಿಸಿದ್ದ ಪವನ್ ಕುಮಾರ್ 'ಕೇಂದ್ರ ಸರ್ಕಾರದ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಅದರಲ್ಲೂ ಟಿಕ್ಟಾಕ್ ಬ್ಯಾನ್ ಆಗಿದೆ ಎಂಬ ವಿಚಾರ ಕೇಳಿ ಬಹಳ ಸಂತೋಷವಾಯ್ತು. ಇನ್ನು ಮುಂದಾದರೂ ಯುವಜನತೆ ಟಿಕ್ಟಾಕ್ಗೆ ಅಡಿಕ್ಟ್ ಆಗುವುದು ಬಿಟ್ಟು ತಮ್ಮ ಅಮೂಲ್ಯ ಸಮಯವನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಬಹುದು' ಎಂದಿದ್ದಾರೆ.
'ಅಷ್ಟೇ ಅಲ್ಲ, ಟಿಕ್ಟಾಕ್ಗೆ ಅಡಿಕ್ಟ್ ಆಗಿದ್ದವರಲ್ಲಿ ಯುವಜನತೆಯೇ ಹೆಚ್ಚು. 10 ವರ್ಷದ ಮಕ್ಕಳು ಕೂಡಾ ಟಿಕ್ಟಾಕ್ ಮಾಡುತ್ತಿದ್ದರು. ಯಾವುದೇ ತಂತ್ರಜ್ಞಾನ ಆಗಿರಲಿ, ಅದರಿಂದ ನಮಗೆ ಉಪಯೋಗವಾಗಬೇಕೇ ಹೊರತು, ನಾವು ಕೆಡುವಂತೆ ಆಗಬಾರದು. ಇಂತಹ ಆ್ಯಪ್ಗಳಿಂದ ಎಲ್ಲರ ಸಮಯ ಹಾಳಾಗುತ್ತಿತ್ತು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಈ ಆ್ಯಪ್ ಬ್ಯಾನ್ ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ. ಇಷ್ಟು ದಿನ ಟಿಕ್ಟಾಕ್ಗಳಲ್ಲಿ ಮುಳುಗಿದ್ದವರು ಈಗ ಬೇರೆ ವಿಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು' ಎಂದು ಪವನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.