ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವ ನಟ-ನಟಿಯರಿಗೆ ಸಮಯವೇ ಸಿಗುವುದಿಲ್ಲ. ಆದ್ರೆ ಧಾರಾವಾಹಿ ಮುಗಿದ ಮೇಲೆ ಮತ್ತೊಂದು ಪ್ರಾಜೆಕ್ಟ್ ಆರಂಭಕ್ಕೂ ಮುನ್ನ ಒಂದು ದೂರದ ದೇಶಕ್ಕೆ ಲಾಂಗ್ ಟ್ರಿಪ್ ಹೋಗಿ ಬರುತ್ತಾರೆ. 'ರಾಧಾರಮಣ' ಧಾರಾವಾಹಿ ಮುಗಿಯುತ್ತಿದ್ದಂತೆ ಸ್ಕಂದ ಅಶೋಕ್ ಕೂಡಾ ವಿದೇಶಕ್ಕೆ ಹಾರಿದ್ದಾರೆ.
ಪತ್ನಿಯೊಂದಿಗೆ ವಿದೇಶ ಪ್ರವಾಸ ಎಂಜಾಯ್ ಮಾಡುತ್ತಿರುವ ರಮಣ - ರಷ್ಯಾ ಪ್ರವಾಸ ಎಂಜಾಯ್ ಮಾಡುತ್ತಿರುವ ಸ್ಕಂದ ಅಶೋಕ್
ವಿದೇಶ ಪ್ರವಾಸ ಎಂದರೆ ಸ್ಕಂದ ಅಶೋಕ್ಗೆ ಅಚ್ಚುಮೆಚ್ಚು. ಹೀಗಾಗಿ ಕಳೆದ ವರ್ಷ ತಮ್ಮ ಪತ್ನಿಯೊಂದಿಗೆ ಫ್ರಾನ್ಸ್ ದೇಶವನ್ನು ಸುತ್ತಾಡಿದ್ದರು. ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
ಸ್ಕಂದ ಅಶೋಕ್ ತಮ್ಮ ಪತ್ನಿ ಜೊತೆ ರಷ್ಯಾಕ್ಕೆ ತೆರಳಿದ್ದಾರೆ. ವಿದೇಶ ಪ್ರವಾಸ ಅಂದ್ರೆ ಇವರಿಗೆ ಅಚ್ಚುಮೆಚ್ಚು. ಹೀಗಾಗಿ ಕಳೆದ ವರ್ಷ ತಮ್ಮ ಪತ್ನಿಯೊಂದಿಗೆ ಫ್ರಾನ್ಸ್ ದೇಶವನ್ನು ಸುತ್ತಾಡಿದ್ದರು. ಅಲ್ಲಿನ ಆಹಾರ ಸಂಸ್ಕೃತಿಗೆ ಮಾರು ಹೋಗಿರುವ ಸ್ಕಂದ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣ್ ಆಗಿ ಅಭಿನಯಿಸಿ, ಮೊದಲ ಧಾರಾವಾಹಿಯಲ್ಲೇ ಸಾಕಷ್ಟು ಅಭಿಮಾನಿಗಳನ್ನು ಪಡೆದಿರುವ ಚಿಕ್ಕಮಗಳೂರಿನ ಚಾಕೊಲೇಟ್ ಹುಡುಗ ಸ್ಕಂದ ಅಶೋಕ್ ಅವರ ಅಭಿನಯಕ್ಕೆ ಫಿದಾ ಆಗದವರಿಲ್ಲ.
'ಚಾರುಲತಾ', 'ಯೂಟರ್ನ್' ಸಿನಿಮಾಗಳ ಮೂಲಕ ಬೆಳ್ಳಿತೆರೆಯಲ್ಲಿ ಕೂಡಾ ಸ್ಕಂದ ಅಶೋಕ್ ಮಿಂಚಿದ್ದಾರೆ. ಆದರೂ ಅವರು ಮನೆಮಾತಾಗಲು ಕಾರಣ 'ರಾಧಾ ರಮಣ' ಧಾರಾವಾಹಿ. ಸ್ಕಂದ, ರಮಣ್ ಆಗಿ ಯಾವಾಗ ಬದಲಾದರೋ ಆಗಲೇ ಜನರು ಅವರನ್ನು ಸ್ವೀಕರಿಸಿದರು. ಧಾರಾವಾಹಿ ಮುಗಿದು ಸುಮಾರು ತಿಂಗಳು ಕಳೆಯುತ್ತಾ ಬಂದರೂ ಇಂದಿಗೂ ಕೂಡಾ ಅವರು ವೀಕ್ಷಕರ ಪಾಲಿನ ಪ್ರೀತಿಯ ರಮಣ್. ಅಷ್ಟರ ಮಟ್ಟಿಗೆ ಅವರ ಪಾತ್ರ ಕಿರುತೆರೆಪ್ರಿಯರನ್ನು ಸೆಳೆದು ಬಿಟ್ಟಿದೆ. 'ರಾಧಾ ರಮಣ' ಧಾರಾವಾಹಿಯೊಂದಿಗೆ 'ಕಾನೂರಾಯಣ' ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ಸ್ಕಂದ, ಇದೀಗ ರೋಹಿತ್ ರಾವ್ ನಿರ್ದೇಶನದ 'ರಣಾಂಗಣ' ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.