ಹೆಣ್ಣು ಮಕ್ಕಳಿಗೆ ಧಾರಾವಾಹಿಗಳಷ್ಟೇ ಅಡುಗೆ ಕಾರ್ಯಕ್ರಮಗಳು ಕೂಡಾ ಬಹಳ ಇಷ್ಟ. ಬಹುತೇಕ ಮಹಿಳೆಯರು ಅಡುಗೆ ಕಾರ್ಯಕ್ರಮವನ್ನು ಮಿಸ್ ಮಾಡದೆ ನೋಡುತ್ತಾರೆ. ಅದರಲ್ಲಿ ಬರುವ ವಿಧವಿಧವಾದ ರೆಸಿಪಿಗಳನ್ನು ಮಾಡಿ, ಬಾಯಿಗಿಟ್ಟು ಚಪ್ಪರಿಸಿದರೆ ಅವರಿಗೆ ಸಮಾಧಾನ. ಅದರಲ್ಲೂ ಬೊಂಬಾಟ್ ಭೋಜನವನ್ನು ಮಿಸ್ ಮಾಡಲು ಸಾಧ್ಯವೇ..?
ನವರಾತ್ರಿಗೆ 'ಬೊಂಬಾಟ್ ಭೋಜನ' ಬಡಿಸಲು ಬರುತ್ತಿದ್ದಾರೆ ಸಿಹಿಕಹಿ ಚಂದ್ರು - Bombat Bhojana start on October 16
ನಟ, ನಿರ್ದೇಶಕ ಸಿಹಿಕಹಿ ಚಂದ್ರು ಅಕ್ಟೋಬರ್ 16 ರಿಂದ 'ಬೊಂಬಾಟ್ ಭೋಜನ' ಕಾರ್ಯಕ್ರಮದ ಮೂಲಕ ಮತ್ತೆ ಮಹಿಳೆಯರಿಗೆ ಅಡುಗೆ ಕಲಿಸಲು ಬರುತ್ತಿದ್ದಾರೆ. ಈ ಬಾರಿ ಇನ್ನೂ ವಿಧ ವಿಧವಾದ ರೆಸಿಪಿಗಳನ್ನು ಚಂದ್ರು ವೀಕ್ಷಕರಿಗೆ ಕಲಿಸಲಿದ್ದಾರೆ.
'ಬೊಂಬಾಟ್ ಭೋಜನ' ಎಂದ ಕೂಡಲೇ ವೀಕ್ಷಕರಿಗೆ ಥಟ್ ಎಂದು ನೆನಪಾಗುವುದು ಸಿಹಿ ಕಹಿ ಚಂದ್ರು. ಪಾಕ ಪ್ರವೀಣ ಎಂದೇ ಜನಪ್ರಿಯರಾಗಿರುವ ಸಿಹಿಕಹಿ ಚಂದ್ರು ಬೊಂಬಾಟ್ ಭೋಜನದ ಮೂಲಕ ನಿಮ್ಮ ಮುಂದೆ ಬರುತ್ತಿದ್ದಾರೆ. ಇದೇ ಅಕ್ಟೋಬರ್ 19 ರಿಂದ ಮಧ್ಯಾಹ್ನ 12 ಗಂಟೆಗೆ ಸಿಹಿ ಕಹಿ ಚಂದ್ರು ಸ್ಟಾರ್ ಸುವರ್ಣ ವಾಹಿನಿ ಮೂಲಕ ನಿಮ್ಮ ಮನೆಗೆ ಬರುತ್ತಿದ್ದಾರೆ. ನವರಾತ್ರಿಯ ಶುಭದಿನದಂದು ಸಿಹಿಕಹಿ ಚಂದ್ರು ಬೊಂಬಾಟ್ ಭೋಜನದ ಹೊಸ ಅಧ್ಯಾಯ ಶುರು ಮಾಡಲಿದ್ದಾರೆ. ಇದರ ಜೊತೆಗೆ ಹಬ್ಬದ ವಿಶೇಷವಾಗಿ ತಾರೆಯರು ಕೂಡಾ ಚಂದ್ರು ಅವರ ಕಿಚನ್ನಲ್ಲಿ ಮಿಂಚಲಿದ್ದಾರೆ. ಅನುಪಮ ಗೌಡ, ಹರ್ಷಿಕಾ ಪೂಣಚ್ಚ, ನೇಹಾ ಗೌಡ, ವನಿತಾ ವಾಸು, ಕೃಷಿ ತಾಪಂಡ , ಕಾರುಣ್ಯ ರಾಮ್ ಅವರು ನವರಾತ್ರಿಯ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿಹಿಕಹಿ ಚಂದ್ರು ಅಡುಗೆ ಮಾಡುವ ವಿಚಾರ ವೀಕ್ಷಕರಿಗೆ ಹೊಸದೇನಲ್ಲ. ಕಳೆದ ಸೀಸನ್ ಗಳಲ್ಲಿ ಹೊಸ ಹೊಸ ಪಾಕಗಳನ್ನು ಮಾಡಿ ತೋರಿಸಿದ್ದ ಪಾಕ ಪ್ರವೀಣ ಸಿಹಿಕಹಿ ಚಂದ್ರು ಈ ಬಾರಿಯೂ ನಳಪಾಕದ ಮೂಲಕ ಪ್ರತಿದಿನ ನಿಮ್ಮ ಮುಂದೆ ಬರಲಿದ್ದಾರೆ. ಇದರ ಜೊತೆಗೆ ಆರೋಗ್ಯ ಆಹಾರದ ಬಗ್ಗೆ ವಿವರವಾದ ಮಾಹಿತಿಯನ್ನು ಡಾ. ಗೌರಿ ನೀಡಲಿದ್ದಾರೆ. ಇದರ ಜೊತೆಗೆ ಬೊಂಬಾಟ್ ಭೋಜನದ ಮತ್ತೊಂದು ವಿಶೇಷ ಎಂದರೆ ನಮ್ಮೂರ ಊಟ. ಅದರಲ್ಲಿ ಸಿಹಿ ಕಹಿ ಚಂದ್ರು ಕರ್ನಾಟಕದ ಸುಪ್ರಸಿದ್ಧ ಹೊಟೇಲ್, ಢಾಬಾ, ಫಾಸ್ಟ್ ಪುಡ್ ಸೆಂಟರ್ಸ್ ಮುಂತಾದ ಕಡೆಗೆ ಭೇಟಿ ನೀಡಿ ಅಲ್ಲಿನ ಆಹಾರ ವಿಶೇಷತೆಗಳನ್ನು ಹಂಚಿಕೊಳ್ಳಲಿದ್ದಾರೆ.