ಟೆಲಿವಿಷನ್ ಸ್ಟಾರ್ ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ನಿಧನದಿಂದ ಒಂದು ಮಧುರ ಪ್ರೇಮಕಥೆ ದುರಂತ ಅಂತ್ಯವಾಗಿದೆ. ಬಾಲಿಕಾ ವಧು ಖ್ಯಾತಿಯ ನಟ, ತನ್ನ ಬಿಗ್ ಬಾಸ್-13ರ ಸಹ ಸ್ಪರ್ಧಿ ಶೆಹ್ನಾಜ್ ಗಿಲ್ ಅವರನ್ನು ಪ್ರೀತಿಸುತ್ತಿದ್ದರು.
ವರದಿಗಳ ಪ್ರಕಾರ, ಶೆಹ್ನಾಜ್ ಮತ್ತು ಸಿದ್ಧಾರ್ಥ ತಮ್ಮ ಪ್ರೇಮವನ್ನು ವಿವಾಹ ಸಂಬಂಧವಾಗಿಸುವ ಬಯಕೆ ಹೊಂದಿದ್ದರು. ಈ ಕುರಿತು ಇಬ್ಬರು ತಮ್ಮ ಮನೆಯವರ ಬಳಿಯೂ ಪ್ರಸ್ತಾಪ ಮಾಡಿದ್ದರು. ಇವರ ಮದುವೆ ಸಮಾರಂಭಕ್ಕಾಗಿ ಮುಂಬೈ ಹೋಟೆಲ್ ಒಂದರ ಜೊತೆ ಮಾತುಕತೆ ಸಹ ನಡೆಸುತ್ತಿದ್ದರಂತೆ. ಡಿಸೆಂಬರ್ನಲ್ಲಿ ಮೂರು ದಿನಗಳ ಸಂಭ್ರಮದ ವಿವಾಹ ಮಹೋತ್ವವವನ್ನು ಯೋಜಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಸಂಗೀತ ಸಂಯೋಜಕ ಅನು ಮಲಿಕ್ ಅವರ ಸಹೋದರ ಬಿಗ್ ಬಾಸ್-13 ಸ್ಪರ್ಧಿ ಅಬು ಮಲಿಕ್ ಸಿದ್ಧಾರ್ಥ್ ಮತ್ತು ಶೆಹ್ನಾಜ್ ಪ್ರೀತಿಯ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. "ಶೆಹ್ನಾಜ್ ಅವರ ನಡುವಿನ ಪ್ರೇಮ ಸಂಬಂಧದ ಬಗ್ಗೆ ಮಾರ್ಚ್ 22, 2020ರಂದು ನನಗೆ ಹೇಳಿದರು. ಇದು ಮೊದಲ ಲಾಕ್ಡೌನ್ಗೆ ಒಂದು ದಿನ ಮೊದಲು ಎಂದು ನಾನು ಭಾವಿಸುತ್ತೇನೆ. ಸಿದ್ಧಾರ್ಥ್ ಅವಳನ್ನು ತುಂಬಾ ಪ್ರೀತಿಸುತ್ತಿದ್ದನು. ಅವಳು ಬೇಸರಗೊಂಡರೆ ಅದು ಅವನ ಮೇಲೂ ಪರಿಣಾಮ ಬೀರುತ್ತಿತ್ತು" ಎಂದು ಕಳೆದುಹೋದ ದಿನಗಳನ್ನು ಮೆಲುಕು ಹಾಕಿದರು.