ರಾಜಕುಮಾರ, ಯುವರತ್ನ ಸಿನಿಮಾಗಳ ನಿರ್ದೇಶಕ ಸಂತೋಷ್ ಆನಂದ ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಅಭಿನಯಿಸಿದ್ದಾರೆ.
ಸದ್ಯ ಪೋಸ್ಟರ್ನಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಜಗ್ಗೇಶ್, ಹೋಟೆಲ್ ಮಾಲೀಕ ಕಮ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಜಗ್ಗೇಶ್‌ಗೆ ಜೋಡಿ ಯಾರು ಆಗ್ತಾರೆ? ಅನ್ನೋ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಸಿಂಪಲ್ ಆಗ್ ಒಂದು ಲವ್ ಸ್ಟೋರಿ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳ ಮೂಲಕ ಭರವಸೆ ನಟಿಯಾಗಿರುವ ನಟಿ ಶ್ವೇತಾ ಶ್ರೀವಾತ್ಸವ್ ನವರಸ ನಾಯಕನಿಗೆ ಜೋಡಿಯಾಗುತ್ತಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸದ್ಯ 'ಹೋಪ್' ಎಂಬ ಸಿನಿಮಾದಲ್ಲಿ ನಟಿಸಿರುವ ಶ್ವೇತಾ ಶ್ರೀವಾತ್ಸವ್, ಇದೀಗ ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಎರಡನೇ ಹಂತದ ಚಿತ್ರೀಕರಣ ಶಿವಮೊಗ್ಗದಲ್ಲಿ ನಡೆಯುತ್ತಿದೆ.
ಡಿಸೆಂಬರ್ ತಿಂಗಳಿನಿಂದ ನಾನು ರಾಘವೇಂದ್ರ ಸ್ಟೋರ್ಸ್ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದೇನೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಜಗ್ಗೇಶ್ ಅವರ ಜತೆ ಸ್ಕ್ರೀನ್ ಹಂಚಿಕೊಳ್ಳುತ್ತಿರೋ ಬಗ್ಗೆ ತುಂಬಾನೇ ಎಕ್ಸೈಟ್ ಆಗಿದ್ದೇನೆ ಎಂದು ಶ್ವೇತಾ ಹೇಳಿದ್ದಾರೆ.
'ರಾಘವೇಂದ್ರ ಸ್ಟೋರ್ಸ್' ಚಿತ್ರದ ಪೋಸ್ಟರ್ 'ರಾಘವೇಂದ್ರ ಸ್ಟೋರ್ಸ್' ಇದೊಂದು ಔಟ್ ಅಂಡ್ ಔಟ್ ಕಾಮಿಡಿ ವಿತ್ ಫ್ಯಾಮಿಲಿ ಸಿನಿಮಾ. ಹೊಂಬಾಳೆ ಫಿಲ್ಮ್ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರ್ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ:ಟೈಗರ್ ಶ್ರಾಫ್ ತಂಗಿ ಬರ್ತ್ಡೇಗೆ ಹೀಗಿತ್ತು ದಿಶಾ ಪಟಾನಿ ವಿಶ್..