ಈಗಾಗಲೇ 'ರಾಧಾರಮಣ' ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ಶ್ವೇತಾ ಇಂದಿಗೂ ರಾಧಾ ಮಿಸ್ ಆಗಿಯೇ ಎಲ್ಲರಿಗೂ ಪರಿಚಿತ. ಧಾರಾವಾಹಿ ಮುಗಿದರೂ, ಶ್ವೇತಾ ಪಾತ್ರಕ್ಕೆ ಮತ್ತೋರ್ವ ನಟಿ ಬಂದು ಹೋದರೂ ಜನರು ಮಾತ್ರ ಈಕೆಯನ್ನು ರಾಧಾ ಮಿಸ್ ಎಂದೇ ಕರೆಯುತ್ತಿದ್ದಾರೆ.
ರಾಧಾ ಮಿಸ್ ಸೊಂಟದ ಮೇಲೆ ಟ್ಯಾಟೂ... ಫೋಟೋಶೂಟ್ನಲ್ಲಿ ಶ್ವೇತಾ ಪ್ರಸಾದ್ ಮಿಂಚಿಂಗು - ರಾಧಾ ಮಿಸ್ ಟ್ಯಾಟೂ ಕ್ರೇಜ್
ಹೊಸ ಫೋಟೋಶೂಟ್ನಲ್ಲಿ ಶ್ವೇತಾ ಹಸಿರು ಮತ್ತು ಗುಲಾಬಿ ಬಣ್ಣದ ಕಾಂಬಿನೇಷನ್ ಇರುವ ಲೆಹಂಗಾ ಧರಿಸಿ ಮಿಂಚಿದ್ದಾರೆ. ಅಲ್ಲದೆ ಸೊಂಟದ ಮೇಲೆ ಟ್ಯಾಟೂ ಕೂಡಾ ಹಾಕಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ಕೆಲವು ದಿನಗಳ ಹಿಂದೆ ಶ್ವೇತಾ ಹೊಸ ಫೋಟೋಶೂಟ್ ಎಲ್ಲರ ಗಮನ ಸೆಳೆದಿತ್ತು. ನಂತರ ಶ್ವೇತಾ ಬಿಗ್ಬಾಸ್ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅವರು ನಿರ್ಧಾರ ಬದಲಿಸಿದ್ದರು. ಇದೀಗ ರಾಧಾ ಮಿಸ್ ಮತ್ತೊಂದು ಪೋಟೋಶೂಟ್ ಮೂಲಕ ಎಲ್ಲರ ಕೇಂದ್ರಬಿಂದುವಾಗಿದ್ದಾರೆ. ಈ ಫೋಟೋಶೂಟ್ನಲ್ಲಿ ಶ್ವೇತಾ ಹಸಿರು ಮತ್ತು ಗುಲಾಬಿ ಬಣ್ಣದ ಕಾಂಬಿನೇಷನ್ ಇರುವ ಲೆಹಂಗಾ ಧರಿಸಿದ್ದು ಇದಕ್ಕೆ ಹೊಂದಿಕೆಯಾಗುವಂತಹ, ಹರಳುಗಳನ್ನು ಪೋಣಿಸಿ ತಯಾರಿಸಿದಂತಹ ಆಭರಣಗಳನ್ನು ಧರಿಸಿ ಮಿರಿ ಮಿರಿ ಮಿಂಚುತ್ತಿದ್ದಾರೆ. ಅಲ್ಲದೆ, ಸೊಂಟದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು ಅಭಿಮಾನಿಗಳು ಕಣ್ಣರಳಿಸುವಂತೆ ಮಾಡಿದ್ದಾರೆ. ಈ ಫೋಟೋಗಳನ್ನು ಶ್ವೇತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಾವು ನಟಿಸಿದ ಎರಡು ಧಾರಾವಾಹಿಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಅಭಿನಯಿಸಿದ್ದ ಶ್ವೇತಾ, ಮಾಡರ್ನ್ ಡ್ರೆಸ್ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಅವರ ಈ ಹೊಸ ಲುಕ್ಗೆ ಪ್ರೇಕ್ಷಕರು ಫಿದಾ ಆಗಿದ್ದಂತೂ ನಿಜ.