ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿರುವ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಲಾಕ್ ಡೌನ್ ಸಮಯವನ್ನು ಮಗನೊಂದಿಗೆ ಕಳೆಯುತ್ತಿದ್ದಾರೆ.
ಕಾದಂಬರಿ, ಸುಮತಿ, ಅರುಂಧತಿ ಧಾರಾವಾಹಿಯಲ್ಲಿ ಅಭಿನಯಿಸಿರುವ ಶ್ವೇತಾ ಚೆಂಗಪ್ಪ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದು ಮಜಾ ಟಾಕೀಸ್ ರಾಣಿಯಾಗಿ ಬದಲಾದ ಬಳಿಕವೇ. ವಾರಾಂತ್ಯದಲ್ಲಿ ಮಜಾ ಟಾಕೀಸ್ ರಾಣಿಯಾಗಿ ಹಾಸ್ಯದ ಮೂಲಕ ಮನರಂಜನೆಯ ಮಹಾಪೂರ ಉಣಿಸುತ್ತಿದ್ದ ಶ್ವೇತಾ ಇದೀಗ ಮುದ್ದು ರಾಜಕುಮಾರ ಜಿಯಾನ್ ಅಯ್ಯಪ್ಪ ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಶ್ವೇತಾ ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು ಹಳೆಯ ಫೊಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಇದೀಗ ಪ್ಯಾರಿಸ್ನ ಡಿಸ್ನಿಲ್ಯಾಂಡ್ಗೆ ತಮ್ಮ ಪತಿ ಕಿರಣ್ ಅವರೊಂದಿಗೆ ಭೇಟಿ ಕೊಟ್ಟಾಗಿನ ಫೊಟೋವನ್ನು ಅಪ್ಲೋಡ್ ಮಾಡಿರುವ ಶ್ವೇತಾ ಲಾಕ್ ಡೌನ್ ಸಮಯದಲ್ಲಿ ಒಂದಷ್ಟು ಹಳೆಯ ಫೊಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ಈ ಫೊಟೋಗಳನ್ನು ನೋಡುವಾಗ ಕಳೆದು ಹೋದ ಸುಂದರ ಕ್ಷಣಗಳು ನೆನಪಾಗುತ್ತದೆ ಎಂದು ಬರೆದಿರುವ ಶ್ವೇತಾ ಡಿಸ್ನಿಲ್ಯಾಂಡ್ಗೆ ಹೋದದ್ದು ನಾಲ್ಕು ವರ್ಷಗಳ ಹಿಂದೆ. 2016ರಲ್ಲಿ ಪ್ಯಾರಿಸ್ಗೆ ಹೋದರೂ ನಿನ್ನೆ ಮೊನ್ನೆ ಹೋದಂತಿದೆ ಎಂದು ಬರೆದಿದ್ದಾರೆ.
ನಾಲ್ಕು ತಲೆಮಾರಿನ ಕುಟುಂಬದ ಫೊಟೋ
ಇದಕ್ಕಿಂತಲೂ ಮೊದಲು ಮದರ್ಸ್ ಡೇಯಂದು ನಾಲ್ಕು ತಲೆಮಾರಿನ ಕುಟುಂಬದ ಫೊಟೋ ಹಾಕಿದ್ದ ಶ್ವೇತಾ, ಸಾಕಷ್ಟು ಸುದ್ದಿಯಲ್ಲಿದ್ದರು. ಅಜ್ಜಿ ಜಾನಕಿ ಅವ್ಬಯ್ಯ, ಅಮ್ಮ ತಾರಾ ಚೆಂಗಪ್ಪ, ಶ್ವೇತಾ ಚೆಂಗಪ್ಪ, ಜಿಯಾನ್ ಅಯ್ಯಪ್ಪ ಜೊತೆಗಿನ ನಾಲ್ಕು ತಲೆಮಾರಿನ ಫೊಟೋ ವೀಕ್ಷಕರ ಮೆಚ್ಚುಗೆಗೂ ಪಾತ್ರವಾಗಿತ್ತು.