ಕರ್ನಾಟಕ

karnataka

ETV Bharat / sitara

ಮಾಸ್ಕ್ ಧರಿಸುವುದು ಹೇಗೆ ಎಂದು ಹೇಳಿಕೊಟ್ಟ ಜಿಯಾನ್ ಅಯ್ಯಪ್ಪ! - ಜಿಯಾನ್ ಅಯ್ಯಪ್ಪ ವಿಡಿಯೋ

ಶ್ವೇತಾ ಚೆಂಗಪ್ಪ ಮುದ್ದಿನ ಮಗ ಜಿಯಾನ್ ಅಯ್ಯಪ್ಪ ಮೊದಲ ಬಾರಿಗೆ ಮಾಸ್ಕ್​​ ಧರಿಸಿದ್ದಾನೆ. ಇನ್ನು ಜಿಯಾನ್​ ಮಾಸ್ಕ್ ಸರಿಯಾಗಿ ಧರಿಸುವ ವಿಡಿಯೋವನ್ನು ಶ್ವೇತಾ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Shweta Changappa
ಶ್ವೇತಾ ಚೆಂಗಪ್ಪ-ಮಗ ಜಿಯಾನ್ ಅಯ್ಯಪ್ಪ

By

Published : Mar 26, 2021, 10:44 AM IST

ಮಜಾ ಟಾಕೀಸ್​ನ ರಾಣಿಯಾಗಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಶ್ವೇತಾ ಚೆಂಗಪ್ಪ ಮುದ್ದಿನ ಮಗ ಜಿಯಾನ್ ಅಯ್ಯಪ್ಪ ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿ ಮಾಡಿದ ಸೆನ್ಸೇಷನ್ ಅಷ್ಟಿಷ್ಟಲ್ಲ.

ಒಂದೂವರೆ ವರ್ಷದ ಪುಟಾಣಿ ಜಿಯಾನ್ ಅಯ್ಯಪ್ಪ ಮುದ್ದು ಮಾತು, ನಗು, ತುಂಟಾಟದ ಮೂಲಕ ನೆಟ್ಟಿಗರ ಮನ ಸೆಳೆದಿದ್ದಾನೆ. ಜಿಯಾನ್ ಅಯ್ಯಪ್ಪ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುವ ಶ್ವೇತಾ ಚೆಂಗಪ್ಪ, ಎರಡು ದಿನದ ಹಿಂದೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸರಿಯಾಗಿ ಮಾಸ್ಕ್ ಧರಿಸುವುದು ಹೇಗೆ ಎಂಬುದನ್ನು ಜಿಯಾನ್ ತಿಳಿದಿದ್ದಾನೆ.

ಮೊದಲ ಬಾರಿಗೆ ಜಿಯಾನ್ ಅಯ್ಯಪ್ಪ ಮಾಸ್ಕ್ ಧರಿಸಿದ್ದಾನೆ ಎಂದು ಕ್ಯಾಪ್ಶನ್ ನೀಡಿರುವ ಶ್ವೇತಾ ಚೆಂಗಪ್ಪ, "ಜಿಯಾನ್ ಮಾಸ್ಕ್ ಸರಿ ಮಾಡುವುದನ್ನು ಕಂಡು ನಮಗೆ ತುಂಬಾನೇ ಆಶ್ಚರ್ಯವಾಯಿತು" ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ "ಮಕ್ಕಳು ನಾವು ಏನು ಹೇಳಿ ಕೊಡುತ್ತೇವೆ ಅದನ್ನ ಕಲಿಯೋದಿಲ್ಲ. ನಾವು ಏನು ಮಾಡ್ತೀವಿ ಅದನ್ನ ನೋಡಿ ಕಲಿಯುತ್ತಾರೆ. ಎಷ್ಟು ನಿಜ ಅಲ್ವಾ ಈ ಮಾತು" ಎಂದು ಶ್ವೇತಾ ಚೆಂಗಪ್ಪ ಬರೆದುಕೊಂಡಿದ್ದಾರೆ.

ABOUT THE AUTHOR

...view details