ಬೆಂಗಳೂರು: ಬಿಗ್ಬಾಸ್ ಸೀಸನ್ 8 ರ ಸ್ಪರ್ಧಿ, ನಟಿ ಶುಭಾ ಪೂಂಜಾ ಎಲಿಮಿನೇಟ್ ಆಗಿದ್ದಾರೆ. ಬಳಿಕ ಸುದೀಪ್ ಜತೆ ವೇದಿಕೆ ಹಂಚಿಕೊಂಡು ಮಾತನಾಡುತ್ತಾ, ಈ ರಿಯಾಲಿಟಿ ಶೋ ನನಗೆ ಮರೆಯಲಾಗದ ಅನುಭವ ನೀಡಿದೆ ಎಂದು ಸಂತಸ ಹಂಚಿಕೊಂಡರು.
ಸುಮಂತ್ ಮಹಾಬಲ ಜೊತೆ ಶುಭ ಪೂಂಜಾ ನಾನು ಮೊದಲಿನಿಂದಲೂ ಎಲ್ಲರನ್ನೂ ನಗಿಸುತ್ತೇನೆ. ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಜೀವನ ತುಂಬಾ ಚಿಕ್ಕದು, ಹೀಗಾಗಿ ಇರುವಷ್ಟು ಸಮಯ ನಗುತ್ತಿರುಬೇಕು ಎಂದುಕೊಂಡಿದ್ದೇನೆ. ನನಗೆ ದೊಡ್ಡ ವಿಷಯಗಳಿಗಿಂತ ಸಣ್ಣಪುಟ್ಟ ವಿಷಯಗಳೇ ಅತಿ ಹೆಚ್ಚು ಖುಷಿ ನೀಡುತ್ತವೆ ಎಂದರು.
ಮನೆಯಿಂದ ಹೊರ ಹೋದ ಬಳಿಕ ನಿಮ್ಮ ಪ್ಲ್ಯಾನ್ ಏನು ಎಂದು ಸುದೀಪ್ ಕೇಳಿದಾಗ, ಈಗಾಗಲೇ ನನಗಾಗಿ ಆರು ತಿಂಗಳ ಕಾಲ ನನ್ನ ಫಿಯಾನ್ಸಿ ಕಾದಿದ್ದಾರೆ. ಬಿಗ್ ಬಾಸ್ ಮನೆಗೆ ಬರಲು ಅವರೇ ಕಾರಣ. ಇನ್ನು ಅವರನ್ನು ಕಾಯಿಸಲು ನನಗೆ ಇಷ್ಟ ಇಲ್ಲ. ಕಾಯುವುದಕ್ಕೆ ಕೊನೆಯಾಗಲಿ. ಮದುವೆ ಆಗಲು ಮುಹೂರ್ತ ಫಿಕ್ಸ್ ಮಾಡಬೇಕಿದೆ ಎಂದರು.
ಮದುವೆಯಾಗುವ ಹುಡುಗ ಸುಮಂತ್ ಮಹಾಬಲ ಜೊತೆ ಶುಭಾ ಪೂಂಜಾ ಅಲ್ಲದೆ, ಸಿನಿಮಾ ನಿರ್ಮಾಣದಲ್ಲಿ ಸಣ್ಣ ಹೆಜ್ಜೆ ಇರಿಸಿದ್ದೇನೆ. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶೂನ್ಯದಿಂದ ಮತ್ತೆ ಮೇಲೆರಬೇಕು ಎಂದು ಆಶಿಸಿದ್ದೇನೆ ಎಂದರು.
ಇದನ್ನೂ ಓದಿ: ಕೊನೆ ವಾರದ ಡಬಲ್ ಎಲಿಮಿನೇಷನ್ : ಶುಭಾ ನಂತ್ರ ಎಲಿಮಿನೇಟ್ ಆಗೋದು ಇವರೇ!