ಕರ್ನಾಟಕ

karnataka

ETV Bharat / sitara

ಸ್ವಾತಂತ್ರ್ಯೋತ್ಸವ ದಿನ ನಿಮ್ಮ ಮನೆಗೆ ಬರಲಿದ್ದಾನೆ 'ಶಿವಾಜಿ ಸುರತ್ಕಲ್' - New Cinema Broadcast

ಈ ಬಾರಿ ಸ್ವಾತಂತ್ರ್ಯೋತ್ಸವ ಸಿನಿ ಪ್ರಿಯರ ಪಾಲಿಗಂತೂ ಡಬಲ್ ಧಮಾಕ. ಒಂದು, ಆಗಸ್ಟ್ 15 ಸ್ವಾತಂತ್ರ್ಯೋತ್ಸವ ದಿನವಾದರೆ, ಮಗದೊಂದು ಹೊಚ್ಚ ಹೊಸ ಚಲನಚಿತ್ರವೊಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

Shivaji Surathkal Cinema Broadcast On Independence Day
ರಮೇಶ್ ಅರವಿಂದ

By

Published : Aug 8, 2020, 8:10 PM IST

ರಮೇಶ್ ಅರವಿಂದ ನಾಯಕರಾಗಿ ನಟಿಸಿರುವ ಮರ್ಡರ್ ಮಿಸ್ಟರಿ ಸಿನಿಮಾ 'ಶಿವಾಜಿ ಸುರತ್ಕಲ್' ಮುಂದಿನ ಶನಿವಾರ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ‌.

ರಮೇಶ್ ಅರವಿಂದ

ಈ ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಮುಂದಿನ ವಾರಾಂತ್ಯದಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಚಂದನವನದ ಹ್ಯಾಂಡ್ಸಮ್‌ ನಟ ರಮೇಶ್ ಅರವಿಂದ್ ಅಭಿನಯದ 101ನೇ ಸಿನಿಮಾ ಶಿವಾಜಿ ಸುರತ್ಕಲ್ ಆಗಿದ್ದು ವಿಭಿನ್ನ ರೀತಿಯ ತಿರುವುಗಳು ಸಿನಿಪ್ರಿಯರಿಗೆ ಮನರಂಜನೆ ನೀಡುವುದಂತೂ ಗ್ಯಾರಂಟಿ.

ಸಚಿವರೊಬ್ಬರ ಪುತ್ರ ಕಾಡಿನ ನಡುವಿನ ರಣಗಿರಿಯ ಹೋಟೆಲ್​ವೊಂದರ ಈಜುಕೊಳದ ಸಮೀಪ ಶವವಾಗಿ ಪತ್ತೆಯಾಗುತ್ತಾನೆ. ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದನ್ನು ಪತ್ತೆ ಹಚ್ಚಲು ಬರುವ ಅಧಿಕಾರಿ ಶಿವಾಜಿ ಸುರತ್ಕಲ್‍ ಯಾವ ರೀತಿಯಲ್ಲಿ ಈ ಕಗ್ಗಂಟನ್ನು ಬೇಧಿಸುತ್ತಾನೆ? ಅನ್ನೋದು ಚಿತ್ರದ ತಿರುಳು.

ರಮೇಶ್ ಅರವಿಂದ

ಆಕಾಶ್ ಶ್ರೀವತ್ಸ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕರಾಗಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ‌‌. ಅವರ ಮಡದಿಯಾಗಿ ರಾಧಿಕಾ ನಾರಾಯಣ್ ನಟಿಸಿದ್ದಾರೆ. ಮನೋವೈದ್ಯೆಯಾಗಿ ಆರೋಹಿ ನಾರಾಯಣ್ ಹಾಗೂ ವಿಲನ್ ಪಾತ್ರದಲ್ಲಿ ಕಿರುತೆರೆಯ ಜನಪ್ರಿಯ ನಟ ವಿನಯ್ ಗೌಡ ಅಭಿನಯಿಸಿದ್ದಾರೆ.

ABOUT THE AUTHOR

...view details