ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 7ರ 113 ದಿನಗಳ ಅದ್ಬುತ ಪ್ರಯಾಣ ಇಂದಿಗೆ ಅಂತ್ಯಗೊಂಡಿದ್ದು, ನಟ ಶೈನ್ ಶೆಟ್ಟಿ ವಿಜೇತರಾಗಿದ್ದಾರೆ.
ಬಿಗ್ ಬಾಸ್ ಸೀಸನ್ 7 ವಿನ್ನರ್ ಶೈನ್ ಶೆಟ್ಟಿ - ಬಿಗ್ ಬಾಸ್ ಸೀಸನ್ 7 ರ ವಿಜೇತ ಶೈನ್ ಶೆಟ್ಟಿ
ಈ ಬಾರಿಯ ಬಿಗ್ ಬಾಸ್ ಸೀಸನ್ 7 ರಲ್ಲಿ 18 ಸ್ಪರ್ಧಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ವಿನ್ನರ್ ಯಾರು ಎಂದು ಆತುರದಿಂದ ಕಾಯುತ್ತಿದ್ದ ಅಭಿಮಾನಿಗಳ ಕಾತರಕ್ಕೆ ಇಂದು ತೆರೆಬಿದ್ದಿದೆ.
ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ವಾಸುಕಿ ವೈಭವ್ ಮನೆಯಿಂದ ಹೊರಬಂದರು. ಬಳಿಕ ಕಾಮಿಡಿ ನಟ ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ನಡುವೆ ಪೈಪೋಟಿ ಇತ್ತು. ಅಂತಿಮವಾಗಿ ಶೈನ್ ಶೆಟ್ಟಿಗೆ ಗೆಲುವಿನ ನಗೆ ಬೀರಿದರು. ಕುರಿ ಪ್ರತಾಪ್ ರನ್ನರ್ ಅಪ್ ಎಂದು ಘೋಷಿತರಾದರು.
ಯಂಗ್ ಅಂಡ್ ಎನರ್ಜೆಟಿಕ್, ಪವರ್‌ಫುಲ್ ಮತ್ತು ಕಂಪ್ಲೀಟ್ ಸ್ಪರ್ಧಿಯಾಗಿದ್ದ ಶೈನ್ ಶೆಟ್ಟಿ, ಟಾಸ್ಕ್, ಕ್ಯಾಪ್ಟೆನ್ಸಿ, ತಮಾಷೆ ಹೀಗೆ ಎಲ್ಲರೊಂದಿಗಿನ ಒಡನಾಟದಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಟಾಟಾ ಮೋಟಾರ್ಸ್ ಅವರ ಅಲ್ಟ್ರೋಸ್ ಕಾರ್, ಪ್ರಾಯೋಜಕರಿಂದ 11 ಲಕ್ಷ ರೂ. ಹಾಗೂ ಎಂಡಮೋಲ್ ಶೈನ್ ಕಡೆಯಿಂದ 50 ಲಕ್ಷ ರೂ. ಮತ್ತು ಟ್ರೋಫಿಯನ್ನು ಶೈನ್ ಶೆಟ್ಟಿ ಪಡೆದುಕೊಂಡರು.