ಜನಪ್ರಿಯ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿರುವ ಕಲರ್ಸ್ ಕನ್ನಡ ಇತ್ತೀಚೆಗಷ್ಟೇ ಹೊಸ ಶೋ ಆರಂಭಿಸಿದ್ದು ಮತ್ತೊಮ್ಮೆ ವೀಕ್ಷಕರಿಗೆ ದುಪ್ಪಟ್ಟು ಮನರಂಜನೆ ನೀಡುತ್ತಿದೆ. ಚಂದು ಗೌಡ ಸಾರಥ್ಯದಲ್ಲಿ ಪ್ರತಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ 'ಚಾಟ್ ಕಾರ್ನರ್' ಕಾರ್ಯಕ್ರಮ ವಿಭಿನ್ನ ಕಾನ್ಸೆಪ್ಟ್ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. ಈಗಾಗಲೇ ಅನೇಕ ಸೆಲಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ್ದಾರೆ.
ಈ ಬಾರಿ ಚಾಟ್ ಕಾರ್ನರ್ನಲ್ಲಿ ಶೈನ್ ಆಗಲು ಹೊರಟಿರುವುದು ಇವರೇ - Shine shetty in Chat corner
ಬಿಗ್ಬಾಸ್ನಿಂದ ಹೊರ ಬಂದು ಬಹಳ ದಿನಗಳ ನಂತರ ಶೈನ್ ಶೆಟ್ಟಿ ಇದೇ ಮೊದಲ ಬಾರಿಗೆ ಚಾಟ್ ಕಾರ್ನರ್ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಶೈನ್ ಸೆಟ್ಟಿ ತಮ್ಮ ತಾಯಿ ಜೊತೆ ಚಾಟ್ ಕಾರ್ನರ್ ಜೊತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ: ಅಭಿಮಾನಿಯ ಫಾಸ್ಟ್ಫುಡ್ ಸೆಂಟರ್ಗೆ ಭೇಟಿ ನೀಡಿ ಎಗ್ರೈಸ್ ಸವಿದ ಸೋನುಸೂದ್
ಈ ವಾರದ ಚಾಟ್ ಕಾರ್ನರ್ನಲ್ಲಿ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಇಬ್ಬರೂ ಚಂದುಗಳ ಸಮಾಗಮವಾಗಲಿದೆ. ಅದು ಕೂಡಾ ಒಂದೇ ವೇದಿಕೆಯಲ್ಲಿ. ಒಬ್ಬರು ನಿರೂಪಣೆ ಸೀಟ್ನಲ್ಲಿ ಕುಳಿತರೆ ಒಬ್ಬರು ಅತಿಥಿ ಸೀಟ್ನಲ್ಲಿರುತ್ತಾರೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಚಂದು ಆಗಿ ನಟಿಸಿದ್ದ ಶೈನ್ ಶೆಟ್ಟಿ ಈ ವಾರದ ಚಾಟ್ ಕಾರ್ನರ್ನ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ನಿರೂಪಕರಾಗಿರುವುದು ಕೂಡಾ ಚಂದು ಪಾತ್ರಧಾರಿಯಾಗಿದ್ದ ಚಂದುಗೌಡ. ಬಿಗ್ಬಾಸ್ ಸೀಸನ್ 7 ರ ಸ್ಪರ್ಧಿಯಾಗಿದ್ದ ಶೈನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿರುವುದು ಕೂಡಾ ತಿಳಿದೇ ಇದೆ. ಬಿಗ್ಬಾಸ್ನಿಂದ ಬಂದ ನಂತರ ಕೆಲವು ದಿನಗಳ ಬ್ರೇಕ್ ಪಡೆದು ಚಾಟ್ ಕಾರ್ನರ್ ಮೂಲಕ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ ಶೈನ್ ಶೆಟ್ಟಿ. ವಿಶೇಷವೆಂದರೆ ಶೈನ್ ಶೆಟ್ಟಿ ಇದೇ ಮೊದಲ ಬಾರಿಗೆ ತಮ್ಮ ಪ್ರೀತಿಯ ಅಮ್ಮನೊಂದಿಗೆ ಕಿರುಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.