ಕರ್ನಾಟಕ

karnataka

ETV Bharat / sitara

ಮತ್ತೆ ಕಾಮಿಡಿ ಮಾಡಿ ಅಭಿಮಾನಿಗಳನ್ನು ರಂಜಿಸಿದ ಶೇಷಪ್ಪ-ನಾಗಪ್ಪ..! - ಬಹಳ ದಿನಗಳ ನಂತರ ಮತ್ತೆ ಒಂದಾದ ನಾಗಪ್ಪ-ಶೇಷಪ್ಪ

ಇತ್ತೀಚೆಗಷ್ಟೇ ಬಿಗ್​​​ಬಾಸ್ 7 ಸ್ಪರ್ಧಿ, ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಬಿಗ್​ ಬಾಸ್ ಸ್ನೇಹಿತರಿಗಾಗಿ ಖಾಸಗಿ ಹೊಟೇಲ್ ಒಂದರಲ್ಲಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದ್ದ ಹರೀಶ್ ರಾಜ್ ಹಾಗೂ ವಾಸುಕಿ ವೈಭವ್ ಇಬ್ಬರೂ ಕಾಮಿಡಿಯಾಗಿ ವಿಡಿಯೋವೊಂದನ್ನು ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​​​ಲೋಡ್ ಮಾಡಿದ್ದಾರೆ.

Harish raj, Vasuki vaibhav
ಹರೀಶ್ ರಾಜ್, ವಾಸುಕಿ ವೈಭವ್

By

Published : Mar 3, 2020, 7:50 PM IST

ಬಿಗ್ ಬಾಸ್ ಒಳಗಿದ್ದ ಶೇಷಪ್ಪ ಹಾಗೂ ನಾಗಪ್ಪ ಬಹಳ ದಿನಗಳ ನಂತರ ಮತ್ತೆ ಒಂದಾಗಿದ್ದು ಮತ್ತೆ ಕಾಮಿಡಿ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಗಳಾಗಿದ್ದ ನಟ ಹರೀಶ್ ರಾಜ್ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಬಿಗ್ ಮನೆಯಿಂದ ಹೊರಬಂದ ನಂತರ ಮತ್ತೆ ಒಂದಾಗಿದ್ದಾರೆ.

ಇತ್ತೀಚೆಗಷ್ಟೇ ಬಿಗ್​​​ಬಾಸ್ 7 ಸ್ಪರ್ಧಿ, ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಬಿಗ್​ ಬಾಸ್ ಸ್ನೇಹಿತರಿಗಾಗಿ ಖಾಸಗಿ ಹೊಟೇಲ್ ಒಂದರಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಬಿಗ್​​ ಬಾಸ್​ 7 ರ ಮಾಜಿ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಹರೀಶ್ ರಾಜ್ ಹಾಗೂ ವಾಸುಕಿ ವೈಭವ್ ಇಬ್ಬರೂ ಕಾಮಿಡಿಯಾಗಿ ವಿಡಿಯೋವೊಂದನ್ನು ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​​​ಲೋಡ್ ಮಾಡಿದ್ದಾರೆ. 'ಬಹಳ ದಿನಗಳ ನಂತರ ಒಂದಾದ ಶೇಷಪ್ಪ ಹಾಗೂ ನಾಗಪ್ಪ' ಎಂದು ವಿಡಿಯೋಗೆ ಕ್ಯಾಪ್ಷನ್ ಕೂಡಾ ನೀಡಲಾಗಿದೆ. ಬಿಗ್​​ ಬಾಸ್ ಮನೆಯಲ್ಲಿ ಶೇಷಪ್ಪ, ನಾಗಪ್ಪ, ಕಳ್ಳ-ಪೊಲೀಸ್​ ಪಾತ್ರಗಳನ್ನು ಮಾಡುತ್ತಾ ವೀಕ್ಷಕರನ್ನು ರಂಜಿಸಿದ್ದರು. ಇದೀಗ ಅದೇ ರೀತಿಯ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಕಷ್ಟು ಜನರು ಮೆಚ್ಚಿ ಕಮೆಂಟ್ ಕೂಡಾ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details