ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಜಮಾನಿ' ಧಾರಾವಾಹಿ ಪ್ರತಿದಿನ ರಾತ್ರಿ ಮನರಂಜನೆಯ ಮಹಾಪೂರವನ್ನೇ ವೀಕ್ಷಕರಿಗೆ ಉಣಬಡಿಸುತ್ತಿದೆ. ವಿಭಿನ್ನ ಕಥಾ ಶೈಲಿಯ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಕೂಡಾ ಈ ಧಾರಾವಾಹಿ ಯಶಸ್ವಿಯಾಗಿದೆ.
'ಸೀತೆ' ಧಾರಾವಾಹಿ ಮೂಲಕ ಬಣ್ಣದ ಪಯಣ ಆರಂಭಿಸಿದ ಶರ್ಮಿಳಾ 'ಯಜಮಾನಿ' ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿ ಪುಣ್ಯ ಆಗಿ ಅಭಿನಯಿಸುತ್ತಿದ್ದ ಸನಾತನಿ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಪುಣ್ಯಳಾಗಿ ಮನೆ ಮಾತಾಗಿದ್ದ ಸನಾತನಿ ಬದಲಿಗೆ ಇದೀಗ ಶರ್ಮಿಳಾ ಚಂದ್ರಶೇಖರ್ ಧಾರಾವಾಹಿಗೆ ಎಂಟ್ರಿ ನೀಡಿದ್ದಾರೆ. ಪೌರಾಣಿಕ ಧಾರಾವಾಹಿ 'ಸೀತೆ'ಯಲ್ಲಿ ಸೀತೆಯಾಗಿ ನಟನಾ ಪಯಣ ಆರಂಭಿಸಿದ ಶರ್ಮಿಳಾ ಮುಂದೆ ಪಲ್ಲವಿ ಅನುಪಲ್ಲವಿ, ಪರಿಣಿತ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಪಲ್ಲವಿ ಅನುಪಲ್ಲವಿ ಧಾರಾವಾಹಿಯ ಅಭಿನಯಕ್ಕಾಗಿ ಪ್ರಶಸ್ತಿ ಪಡೆದಿರುವ ಶರ್ಮಿಳಾಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ಜೀ ಕನ್ನಡ ವಾಹಿನಿಯ 'ಪತ್ತೆದಾರಿ ಪ್ರತಿಭಾ' ಧಾರಾವಾಹಿ.
ಪತ್ತೇದಾರಿ ಪ್ರತಿಭಾ ಆಗಿ ಶರ್ಮಿಳಾ ಫೇಮಸ್ ಸಾಮಾನ್ಯ ಗೃಹಿಣಿಯೊಬ್ಬಳು ತನ್ನೆಲ್ಲಾ ಕೆಲಸದ ನಡುವೆ ಪತ್ತೇದಾರಿಕೆ ಕೆಲಸ ಹೇಗೆ ಮಾಡುತ್ತಾಳೆ ಎಂಬ ಸಾರಾಂಶ ಹೊಂದಿದ್ದ ಪತ್ತೇದಾರಿ ಪ್ರತಿಭಾ ಧಾರಾವಾಹಿಯ ಮೂಲಕ ನೂರಾರು ವೀಕ್ಷಕರ ಮನ ಗೆದ್ದ ಶರ್ಮಿಳಾ ಅದ್ಭುತ ಕೂಚಿಪುಡಿ ನೃತ್ಯಗಾರ್ತಿ ಕೂಡಾ ಹೌದು. ದಿ. ಲಕ್ಷ್ಮಿ ರಾಜಾಮಣಿ ಅವರಿಂದ ಕೂಚಿಪುಡಿ ನೃತ್ಯ ಕಲಿತಿರುವ ಶರ್ಮಿಳಾ, ಸುಮಾರು 20 ವರ್ಷಗಳ ಕಾಲ ಕೂಚಿಪುಡಿ ನೃತ್ಯವನ್ನು ಅಭ್ಯಾಸ ಮಾಡಿದ್ದಾರೆ. ಶರ್ಮಿಳಾ ಬಣ್ಣದ ಲೋಕಕ್ಕೆ ಕಾಲಿಡಲು ನೃತ್ಯವೇ ಕಾರಣವಂತೆ. ಇದುವರೆಗೂ ಸುಮಾರು ಸ್ಟೇಜ್ ಶೋಗಳನ್ನು ಅವರು ನೀಡಿದ್ದಾರೆ.
'ಯಜಮಾನಿ'ಯಾಗಿ ಪ್ರೇಕ್ಷಕರನ್ನು ರಂಜಿಸಲು ಶರ್ಮಿಳಾ ರೆಡಿ ಪೌರಾಣಿಕ ಧಾರಾವಾಹಿ ಸೀತೆಗೆ ಧಾರಾವಾಹಿ ತಂಡ ಶಾಸ್ತ್ರೀಯ ನೃತ್ಯಗಾರ್ತಿಗಾಗಿ ಹುಡುಕಾಟ ನಡೆಸುತ್ತಿತ್ತು. ಆ ಸಮಯದಲ್ಲಿ ಸ್ನೇಹಿತೆಯ ಮುಖಾಂತರ ಈ ವಿಷಯ ತಿಳಿದ ಶರ್ಮಿಳಾ ಆಡಿಶನ್ಗೆ ಹೋಗಿ ಆ ಪಾತ್ರಕ್ಕೆ ಆಯ್ಕೆಯಾದರು. ಸೀತೆಯಾಗಿ ನಟನಾ ಯಾನ ಆರಂಭಿಸಿದ ಶರ್ಮಿಳಾ ಇದೀಗ ಪುಣ್ಯ ಆಗಿ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.