ನೈಜ ಘಟನೆಯನ್ನು ಆಧರಿಸಿದ ಕ್ರೈಂ ಸ್ಟೋರಿ 'ಶಾಂತಂ ಪಾಪಂ' ಸೀಸನ್ 3 ಇದೇ ತಿಂಗಳ ಅಂತ್ಯದಂದು ಮತ್ತೆ ಪ್ರಸಾರ ಆರಂಭಿಸಲಿದೆ. ಪ್ರತಿ ನಿತ್ಯ ನಡೆಯುವ ಅಪರಾಧಗಳ ಕಥೆ ಇದಾಗಿದೆ. ಅಪರಾಧ ಪ್ರಕರಣಗಳನ್ನು ಹೇಗೆ ಪತ್ತೆ ಹಚ್ಚಲಿದ್ದಾರೆ, ಅಪರಾಧಿಗಳನ್ನು ಪೊಲೀಸರು ಹೇಗೆ ಬಂಧಿಸಲಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ 'ಶಾಂತಂ ಪಾಪಂ'ನಲ್ಲಿ ತೋರಿಸಲಾಗಿದೆ.
'ಶಾಂತಂ ಪಾಪಂ' ಸೀಸನ್ 3 ಇದೇ ತಿಂಗಳಿಂದ ಪ್ರಸಾರ ಆರಂಭ - Shantam papam is Crime story
ಈಗಾಗಲೇ 2 ಸಂಚಿಕೆಗಳು ಪ್ರಸಾರವಾಗಿ ಅಭಿಮಾನಿಗಳ ಮೆಚ್ಚುಗೆ ಗಳಿಸಿರುವ'ಶಾಂತಂ ಪಾಪಂ' ಈಗ ಮೂರನೇ ಸೀಸನ್ ಆರಂಭಿಸಲಿದೆ. ನವೆಂಬರ್ 30 ರಿಂದ ರಾತ್ರಿ 10 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.
ಇದೇ ನವೆಂಬರ್ 30 ರಿಂದ ರಾತ್ರಿ 10 ಗಂಟೆಗೆ 'ಶಾಂತಂ ಪಾಪಂ' ಸೀಸನ್ 3 ಪ್ರಸಾರವಾಗಲಿದೆ. ಕಳೆದ 2 ಸೀಸನ್ಗಳಿಗೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸೀಸನ್ನಲ್ಲಿ ಕೂಡಾ ವಾಹಿನಿ ಉತ್ತಮ ಟಿಆರ್ಪಿ ಪಡೆಯುವ ನಿರೀಕ್ಷೆಯಲ್ಲಿದೆ. ಈ ಸೀಸನ್ಗೆ ವೆಬ್ ಸೀರೀಸ್ ಮಾದರಿಯಲ್ಲಿ ಶೂಟಿಂಗ್ ನಡೆಸಲಾಗಿದೆ. ನಿಜ ಜೀವನದಲ್ಲಿ ನಡೆಯುವ ಕ್ರೈಂ ಕಥೆಯನ್ನು ಪೊಲೀಸರು ಹೇಗೆ ಪತ್ತೆ ಮಾಡುತ್ತಾರೆ, ಅಪರಾಧಿಗಳು ತಾವು ಮಾಡಿರುವ ತಪ್ಪಿನಿಂದ ತಪ್ಪಿಸಿಕೊಳ್ಳಲು ಏನು ತಂತ್ರ ಹೂಡುತ್ತಾರೆ ಎಂಬ ವಿಚಾರವನ್ನು ಎಳೆ ಎಳೆಯಾಗಿ ತೋರಿಸುವ 'ಶಾಂತಂ ಪಾಪಂ'. ಕಾರಣಾಂತರಗಳಿಂದ ನಿಂತು ಹೋಗಿತ್ತು. ಇದೀಗ ಈ ಶೋ ಮತ್ತೆ ಪ್ರಾರಂಭವಾಗುತ್ತಿದೆ. ಕಿರುತೆರೆ ಕಲಾವಿದರು, ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ರಿಯಲ್ ಲೈಫ್ ನಿರೂಪಕರು ಒಂದೊಂದು ಸಂಚಿಕೆಯ ನಿರೂಪಣೆ ಮಾಡಲಿದ್ದಾರೆ. ಇಂತಹ ಕಾರ್ಯಕ್ರಮಗಳು ಅಪರಾಧದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿದೆ.