ಕರ್ನಾಟಕ

karnataka

ETV Bharat / sitara

ಬಿಗ್​ಬಾಸ್​ ಮನೆಯಿಂದ ಶಂಕರ್ ಅಶ್ವಥ್ ಔಟ್​ - ಸ್ಫರ್ಧಿ ಶಂಕರ್ ಅಶ್ವಥ್ ಎಲಿಮಿನೇಟ್​

ಬಿಗ್​ಬಾಸ್ ಮನೆಯಿಂದ ಹಿರಿಯ ಸದಸ್ಯ ಶಂಕರ್ ಅಶ್ವಥ್ ಹೊರ ಬಂದಿದ್ದಾರೆ. ಈ ವಾರ ನಿಧಿ ಸುಬ್ಬಯ್ಯ, ಶಮಂತ್ ಬ್ರೊ ಗೌಡ, ಅರವಿಂದ್, ಶುಭಾ ಪೂಂಜಾ ಹಾಗು ಶಂಕರ್ ಅವರು ನಾಮಿನೇಟ್ ಆಗಿದ್ದರು.

Shankar Ashwath eliminated from Bigg Boss

By

Published : Apr 5, 2021, 10:23 AM IST

ಬಿಗ್​​ಬಾಸ್ ಮನೆಯಿಂದ ಹಿರಿಯ ಸದಸ್ಯ ಶಂಕರ್ ಅಶ್ವಥ್ ಹೊರಬಂದಿದ್ದಾರೆ. ಈ ಮೂಲಕ ತಮ್ಮ ಆಟವನ್ನು ಕೊನೆಗೊಳಿಸಿದ್ದಾರೆ.

ಕನ್ನಡ ಬಿಗ್​ಬಾಸ್​ ಸೀಸನ್​-08

ಈ ವಾರ ನಿಧಿ ಸುಬ್ಬಯ್ಯ, ಶಮಂತ್ ಬ್ರೊ ಗೌಡ, ಅರವಿಂದ್, ಶುಭಾ ಪೂಂಜಾ ಹಾಗು ಶಂಕರ್ ಅವರು ನಾಮಿನೇಟ್ ಆಗಿದ್ದರು. ಆದರೆ ಹೆಚ್ಚಿನ ವೋಟ್ ಸಿಗದೆ ಶಂಕರ್ ಮನೆಯಿಂದ ಹೊರ ಬಿದ್ದಿದ್ದಾರೆ.

ಕನ್ನಡ ಬಿಗ್​ಬಾಸ್​ ಸೀಸನ್​-08

ಶಂಕರ್​ ಅವರಿಗೆ ವಯಸ್ಸಾಗಿದ್ದು, ಆರೋಗ್ಯ ಸಮಸ್ಯೆಯಿಂದ ಟಾಸ್ಕ್​​​ಗಳಲ್ಲಿ ಹೆಚ್ಚು ಭಾಗವಹಿಸಲು ಆಗುತ್ತಿರಲಿಲ್ಲ. ಹಾಗಾಗಿ ಹೆಚ್ಚು ಸದಸ್ಯರೊಂದಿಗೆ ಬೆರೆಯಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ‌ ಎರಡು ಬಾರಿ ಕಳಪೆ ಪ್ರದರ್ಶನದ ಬೋರ್ಡ್​ ಕೂಡಾ ಪಡೆದಿದ್ದರು.

ಕನ್ನಡ ಬಿಗ್​ಬಾಸ್​ ಸೀಸನ್​-08

ಕಳೆದ ವಾರ ನಡೆದ ಟಾಸ್ಕ್​​​ನಲ್ಲಿ ಸ್ವಿಮ್ಮಿಂಗ್ ಪೂಲ್​​ನಲ್ಲಿ ವೈಷ್ಣವಿ ಗೌಡ ಹೆಚ್ಚು ಗಂಟೆಗಳ ಕಾಲ ನಿಂತಿದ್ದರು. ಆದರೆ ಆ ಆಟವನ್ನು ನಿಲ್ಲಿಸುವುದಕ್ಕಾಗಿ ಶಂಕರ್ ನೀರಿಗೆ ಹಾರಿ ವೈಷ್ಣವಿಯವರನ್ನು ನೀರಿಗೆ ದಬ್ಬಿದ್ದರು. ಇದು ಮನೆಯ ಯಾವ ಸದಸ್ಯರಿಗೂ ಇಷ್ಟವಾಗಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಮನೆಯಿಂದ ಹೊರ ಬಂದಿದ್ದಾರೆ.

ಬಿಗ್​ಬಾಸ್​ ಸ್ಫರ್ಧಿ ದಿವ್ಯಾ ಸುರೇಶ್​

ಮನೆಯಿಂದ ಹೊರ ಬಂದ ಬಳಿಕ ಮಾತನಾಡಿದ ಶಂಕರ್ ಅಶ್ವಥ್, 35 ದಿನ ಸಾಕಾಯ್ತು ಅನ್ನಿಸಲ್ಲ. ಆದರೆ ಮನೆಯಲ್ಲಿ ಮನಸ್ಸಿದೆ. ಶಕ್ತಿ ಮೀರಿ ನೀಡಿದ ಟಾಸ್ಕ್ ಮಾಡಿದೆ. ನನಗೆ ಸ್ಪೈನಲ್ ಕಾರ್ಡ್ ಆಪರೇಷನ್ ಆಗಿದೆ. ಟಾಸ್ಕ್ ವೇಳೆ ಏನಾದ್ರೂ ಆದ್ರೆ ಅನ್ನೋ ಭಯ. 82 ವಯಸ್ಸಿನ ತಾಯಿ ಇದ್ದಾರೆ. ಹೆಂಡ್ತಿ ಇದ್ದಾರೆ. ಇವರಿಗೆಲ್ಲ ನಾನು ಭಾರ ಆಗ್ತೀನಿ ಅನ್ನೋ ಭಯ ಶುರುವಾಗಿತ್ತು ಎಂದಿದ್ದಾರೆ.

ABOUT THE AUTHOR

...view details