ಮನರಂಜನೆ ಕ್ಷೇತ್ರದಲ್ಲಿ ಯಶಸ್ವಿ 25 ವಸಂತಗಳನ್ನು ಪೂರೈಸಿರುವ ವೀಕ್ಷಕರ ನೆಚ್ಚಿನ ಉದಯ ಟಿವಿ ಇದೀಗ ವಿಭಿನ್ನ ಧಾರಾವಾಹಿಗಳ ಮೂಲಕ ಗಮನ ಸೆಳೆಯುತ್ತಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಆರಂಭವಾದ 'ಸೇವಂತಿ' ಧಾರಾವಾಹಿ ಇದೀಗ 200 ಸಂಚಿಕೆಗಳನ್ನು ಪೂರೈಸಿದೆ.
ಯಶಸ್ವಿ 200 ಸಂಚಿಕೆ ಪೂರೈಸಿದ 'ಸೇವಂತಿ' - 200 ಎಪಿಸೋಡ್ಗಳನ್ನು ಪೂರೈಸಿದ ಸೇವಂತಿ
ಸೇವಂತಿ ತಮಿಳು ಧಾರಾವಾಹಿ 'ರೋಜಾ' ರೀಮೇಕ್ ಆಗಿದ್ದರೂ ವೀಕ್ಷಕರು ಇದನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ. ಅದಕ್ಕೆ ಇದರ ವಿಭಿನ್ನ ಕಥಾ ಶೈಲಿ ಮತ್ತು ಕಲಾವಿದರೇ ಕಾರಣ.
ಸರಿಗಮ ನಿರ್ಮಾಣ ಸಂಸ್ಥೆ ಅಡಿಯಲ್ಲಿ ವಿನೋದ್ ನಿರ್ದೇಶಿಸುತ್ತಿರುವ ಈ ಧಾರಾವಾಹಿಯಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕೂಡಾ ಬಣ್ಣ ಹಚ್ಚಿರುವುದು ವಿಶೇಷ. ಆದರೆ ಇದೀಗ ಅವರ ಪಾತ್ರವೂ ಬದಲಾಗಿದ್ದು ಆಶಾಲತಾ, ಭಾರತಿ ಅವರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಶೃತಿ ಕೂಡಾ ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಸೇವಂತಿ, ತಮಿಳು ಧಾರಾವಾಹಿ 'ರೋಜಾ' ರೀಮೇಕ್ ಆಗಿದ್ದರೂ ವೀಕ್ಷಕರು ಇದನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ. ಅದಕ್ಕೆ ಇದರ ವಿಭಿನ್ನ ಕಥಾ ಶೈಲಿ ಮತ್ತು ಕಲಾವಿದರೇ ಕಾರಣ.
ಪಲ್ಲವಿ ಗೌಡ ಈ 'ಸೇವಂತಿ' ಧಾರಾವಾಹಿಯ ನಾಯಕಿ. ಶಿಶಿರ್ ಶಾಸ್ತ್ರಿ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಮಂಜುನಾಥ್ ಭಟ್, ಮೈಕೋ ಮಂಜು, ಕೃಷ್ಣ ಅಡಿಗ, ಹಂಸ, ಸಂಗೀತ, ರೂಪಾ ಪ್ರಭಾಕರ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ.