ಮೇ 25ರಿಂದ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಚಿತ್ರೀಕರಣ ಆರಂಭವಾಗಲಿದೆ ಎಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತಿಳಿಸಿದೆ.
ಮೇ 25ರಿಂದ ಧಾರಾವಾಹಿಗಳ ಚಿತ್ರೀಕರಣ ಆರಂಭ - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಕಾರ್ಮಿಕರು ಹಾಗೂ ನಟ-ನಟಿಯರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡು ಹಾಗೂ ಚಾನೆಲ್ಗಳ ಜೊತೆಗೆ ಚರ್ಚಿಸಿ ಮೇ 25ರಿಂದ ಚಿತ್ರೀಕರಣ ಮಾಡುವುದಕ್ಕೆ ಧಾರಾವಾಹಿ ತಂಡಗಳಿಗೆ ತಿಳಿಸಲಾಗಿದೆ ಎಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತಿಳಿಸಿದೆ.

ಮಂಗಳವಾರವಷ್ಟೇ ರಾಜ್ಯ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ ಕಿರುತೆರೆಯ ಶೂಟಿಂಗ್ ಮಾಡಲು ಅನುಮತಿ ನೀಡಿದೆ. ಯಾವುದೇ ರಿಯಾಲಿಟಿ ಶೋಗಳು ಹಾಗೂ ಹೊರಾಂಗಣ ಚಿತ್ರೀಕರಣ ಹೊರತುಪಡಿಸಿ ಕೇವಲ ಒಳಾಂಗಣ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದೆ. ಆ ನಿಟ್ಟಿನಲ್ಲಿ ಇಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಪದಾಧಿಕಾರಿಗಳ ಸಭೆ ನಡೆಸಿ ಎಲ್ಲಾ ಸಾಧಕ ಭಾದಕಗಳ ಬಗ್ಗೆ ಚರ್ಚಿಸಿ ಮೇ 25ರಿಂದ ಧಾರಾವಾಹಿಗಳ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ನೀಡಿದ್ದಾರೆ.
ಚಿತ್ರೀಕರಣ ಆರಂಭ ಏಕಾಏಕಿ ಸಾಧ್ಯವಿಲ್ಲ. ಕಾರ್ಮಿಕರ ಸಮಸ್ಯೆ ಉಂಟಾಗುತ್ತೆ. ಅಲ್ಲದೆ ಕಾರ್ಮಿಕರು ಹಾಗೂ ನಟ-ನಟಿಯರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡು ಹಾಗೂ ಚಾನೆಲ್ಗಳ ಜೊತೆಗೆ ಚರ್ಚಿಸಿ ಮೇ 25ರಿಂದ ಚಿತ್ರೀಕರಣ ಮಾಡುವುದಕ್ಕೆ ಧಾರಾವಾಹಿ ತಂಡಗಳಿಗೆ ತಿಳಿಸಲಾಗಿದೆ ಎಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತಿಳಿಸಿದೆ.