ಸ್ಟಾರ್ ಸುವರ್ಣ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಹೊಸ ರಿಯಾಲಿಟಿ ಶೋ 'ಗಾನ ಬಜಾನ'ದ ಬಗ್ಗೆ ವೀಕ್ಷಕರಿಗೆಲ್ಲಾ ತಿಳಿದೇ ಇದೆ. ಲೂಸ್ ಮಾದ ಖ್ಯಾತಿಯ ಯೋಗೀಶ್ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ರಿಯಾಲಿಟಿ ಶೋನಲ್ಲಿ ಸೆಲಬ್ರಿಟಿಗಳು ಸ್ಪರ್ಧಿಗಳಾಗಿ ಮಿಂಚುತ್ತಿದ್ದಾರೆ.
'ಗಾನ ಬಜಾನ' ಕಾರ್ಯಕ್ರಮದಲ್ಲಿ ಸೀರಿಯಲ್ಗಳ ವಾರ್..! - ಗಾನಬಜಾನದಲ್ಲಿ ಧಾರಾವಾಹಿಗಳ ಸಂತೆ
ಈ ವಾರದ 'ಗಾನಬಜಾನ' ಕಾರ್ಯಕ್ರಮದಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯ ನಟನಟಿಯರು ಭಾಗವಹಿಸಲಿದ್ದಾರೆ. ಈ ಎಪಿಸೋಡ್ ನೋಡಲು ಧಾರಾವಾಹಿಪ್ರಿಯರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.
ಇದೀಗ ಸ್ಟಾರ್ ಪರಿವಾರದವರು ಈ ಶೋನಲ್ಲಿ ಭಾಗವಹಿಸುವ ಮೂಲಕ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಲಿದ್ದಾರೆ. ಹೌದು, ಈ ವಾರದ 'ಗಾನಬಜಾನ' ಕಾರ್ಯಕ್ರಮದಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯ ನಟನಟಿಯರು ಭಾಗವಹಿಸಲಿದ್ದಾರೆ. 'ಮರಳಿ ಬಂದು ಸೀತೆ' ಮತ್ತು 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಕಲಾವಿದರು ಇದೀಗ 'ಗಾನಬಜಾನ' ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟನೆಯ ಹೊರತಾಗಿ ರಿಯಾಲಿಟಿ ಶೋ ಮೂಲಕ ಅವರು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಲು ಸ್ಟಾರ್ ಪರಿವಾರದವರು ನಿಮ್ಮ ಮುಂದೆ ಬರಲಿದ್ದಾರೆ. ಈ ಎಪಿಸೋಡ್ ನೋಡಲು ಧಾರಾವಾಹಿಪ್ರಿಯರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.