ಸತತ ಸುಮಾರು ಎರಡು ತಿಂಗಳ ನಂತರ ಧಾರಾವಾಹಿಗಳ ಶೂಟಿಂಗ್ ಇಂದು ಅಧಿಕೃತವಾಗಿ ಸರ್ಕಾರದ ಮಾರ್ಗಸೂಚಿ ಮೂಲಕವೇ ಆರಂಭಗೊಂಡಿವೆ. ಪ್ರತಿಯೊಬ್ಬರೂ ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿ ಶೂಟಿಂಗ್ ಸೆಟ್ನಲ್ಲಿ ಭಾಗವಹಿಸುವುದು ಹಾಗೂ ತಮ್ಮ ಮೇಕಪ್ಅನ್ನು ತಾವೇ ಮಾಡಿಕೊಳ್ಳುವುದು ಕೂಡಾ ಕಡ್ಡಾಯವಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪ್ರತಿ ಎರಡು ಗಂಟೆಗೊಮ್ಮೆ ಟೆಂಪರೇಚರ್ ಟೆಸ್ಟ್ ವರದಿಯನ್ನು ಚಾನೆಲ್ ಹಾಗೂ ಪ್ರೊಡಕ್ಷನ್ ಕಂಪನಿಗೆ ಕಳುಹಿಸಬೇಕು. ಮೇಕಪ್ ವಸ್ತುಗಳನ್ನ ಕಲಾವಿದರೇ ತರುವುದು ಹಾಗೂ ತಾವೇ ಮಾಡಿಕೊಳ್ಳುವುದು ಹಾಗೂ ಚಿತ್ರೀಕರಣದಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಇನ್ಶುರೆನ್ಸ್ ಮಾಡಿಸಲು ಕೂಡ ಸಿದ್ಧತೆ ನಡೆದಿದೆ.
ಮತ್ತೆ ಆರಂಭವಾಯ್ತು ಸೀರಿಯಲ್ ಶೂಟಿಂಗ್ ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ, ಗಟ್ಟಿಮೇಳ ಪಾರು, ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ, ಸ್ಟಾರ್ ಸುವರ್ಣ ವಾಹಿನಿಯ ಇಂತಿ ನಿಮ್ಮ ಆಶಾ ಸೇರಿದಂತೆ ಪ್ರಮುಖವಾಗಿ ಟಿಆರ್ಪಿಯಲ್ಲಿ ಟಾಪ್ ಟೆನ್ ಸ್ಥಾನದಲ್ಲಿದ್ದ ಸೀರಿಯಲ್ಗಳು ಇಂದಿನಿಂದ ಶೂಟಿಂಗ್ ಆರಂಭಿಸಿವೆ.
ಉದಯ ವಾಹಿನಿಯ ಮನಸಾರೆ ಧಾರಾವಾಹಿ ನಾಳೆಯಿಂದ ಹಾಗೂ ಸೇವಂತಿ ಧಾರಾವಾಹಿ ಮೇ 28ರಿಂದ, ಸ್ಟಾರ್ ಸುವರ್ಣ ಪ್ರೇಮಲೋಕ ಧಾರಾವಾಹಿ ಜೂನ್ ಒಂದರಿಂದ ಶೂಟಿಂಗ್ ಆರಂಭಿಸಲಿವೆ. ಕೊರೊನಾ ಭೀತಿಯಿಂದ ಸಿನಿಮಾ, ಧಾರಾವಾಹಿಗಳ ಚಿತ್ರೀಕರಣ ನಿಲ್ಲಿಸಲಾಗಿತ್ತು. ಈ ಕಾರಣದಿಂದ ಧಾರಾವಾಹಿಗಳ ಪ್ರಸಾರಕ್ಕೂ ತೊಂದರೆ ಆಗಿತ್ತು. ಬ್ಯಾಂಕಿಂಗ್ ಎಪಿಸೋಡ್ಗಳು ಇಲ್ಲದ್ದರಿಂದ ಹಳೆಯದ್ದನ್ನೇ ಮರು ಪ್ರಸಾರ ಮಾಡುವಂತಾಗಿತ್ತು.
ಒಟ್ಟಾರೆಯಾಗಿ ಇಂದಿನಿಂದ ಧಾರಾವಾಹಿ ಶೂಟಿಂಗ್ ಆರಂಭವಾಗಿದ್ದು, ಜೂನ್ 1ರಿಂದ ವಿವಿಧ ಧಾರಾವಾಹಿಗಳ ಹೊಸ ಎಪಿಸೋಡ್ಗಳು ಪ್ರಸಾರವಾಗಲಿವೆ.