ಕರ್ನಾಟಕ

karnataka

ಸದ್ಯದಲ್ಲೇ ಧಾರಾವಾಹಿಗಳ ಚಿತ್ರೀಕರಣ ಶುರುವಾಗುವ ಸಾಧ್ಯತೆ!

By

Published : Jun 15, 2021, 12:38 PM IST

ರಾಜ್ಯದಲ್ಲಿ ಲಾಕ್​ಡೌನ್​ ಹೇರಿದ್ದರಿಂದ ಧಾರಾವಾಹಿಗಳ ತಂಡ ಹೈದರಾಬಾದ್​ಗೆ ದೌಡಾಯಿಸಿತ್ತು. ಇನ್ನೆರಡು ವಾರಗಳಿಗಾಗುವಷ್ಟು ಬ್ಯಾಂಕಿಂಗ್ ಸಂಚಿಕೆಗಳ ಚಿತ್ರೀಕರಣದ ಬಳಿಕ ರಾಜಧಾನಿಗೆ ಮರಳಿರುವ ತಂಡಗಳು, ರಾಜ್ಯದಲ್ಲೇ ಚಿತ್ರೀಕರಣ ನಡೆಸುವ ಯೋಜನೆಯಲ್ಲಿವೆ.

shooting
ಧಾರಾವಾಹಿಗಳ ಚಿತ್ರೀಕರಣ

ಕನ್ನಡ ಧಾರಾವಾಹಿಗಳ ತಂಡ ಎರಡು ವಾರಗಳ ಕಾಲ ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಸಿ, ಕಳೆದ ವಾರ ಬೆಂಗಳೂರಿಗೆ ವಾಪಸಾದವು.

ಇದೀಗ ರಾಜ್ಯ ಸರ್ಕಾರ ಲಾಕ್​ಡೌನ್ ಹಂತ ಹಂತವಾಗಿ ಸಡಿಲಿಸುತ್ತಿದೆ. ಹಾಗಾಗಿ ಮೂಲಗಳ ಪ್ರಕಾರ ಕೆಲವೇ ಸಿಬ್ಬಂದಿಯನ್ನಿಟ್ಟುಕೊಂಡು ಚಿತ್ರೀಕರಣ ನಡೆಸಲು ಧಾರಾವಾಹಿಗಳ ತಂಡಗಳು ಯೋಜಿಸುತ್ತಿವೆ.

ಸದ್ಯ ಇನ್ನೆರಡು ವಾರಗಳಿಗಾಗುವಷ್ಟು ಬ್ಯಾಂಕಿಂಗ್ ಸಂಚಿಕೆಗಳು ಇರುವುದರಿಂದ ಇನ್ನು ಮುಂದೆ ತಮ್ಮ ತಮ್ಮ ಶೂಟಿಂಗ್ ಸ್ಪಾಟ್​ಗಳಲ್ಲಿ ಚಿತ್ರೀಕರಣ ನಡೆಸಲು ಧಾರಾವಾಹಿ ತಂಡಗಳು ಸಿದ್ಧತೆ ನಡೆಸಿವೆ. ಕಳೆದ ವರ್ಷ ಲಾಕ್​ಡೌನ್ ಆದಾಗ ಎಲ್ಲಾ ವಾಹಿನಿಗಳಲ್ಲೂ ಹಳೆಯ ಸಂಚಿಕೆಗಳನ್ನೇ ಪ್ರಸಾರ ಮಾಡಲಾಗಿತ್ತು. ಆದರೆ ಈ ಬಾರಿ ಹೈದರಾಬಾದ್​ನಲ್ಲಿ ಶೂಟಿಂಗ್​ಗೆ ಅವಕಾಶ ನೀಡಿದ್ದರಿಂದ ಎಲ್ಲಾ ಜನಪ್ರಿಯ ಧಾರಾವಾಹಿಗಳ ತಂಡ ಹೈದರಾಬಾದ್​ಗೆ ತೆರಳಿ ಚಿತ್ರೀಕರಣ ನಡೆಸಿದವು.

ಅಲ್ಲಿಂದಲೇ ನಮ್ಮ ನಟ-ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಶೂಟಿಂಗ್ ಸ್ಪಾಟ್​ನ ಕೆಲವು ಫೋಟೋಗಳನ್ನು, ವಿಡಿಯೋಗಳನ್ನು ಅಪ್​ಲೋಡ್ ಮಾಡುತ್ತಿದ್ದರು. ಈ ವಾರ ಜನಪ್ರಿಯ ರಿಯಾಲಿಟಿ ಶೋಗಳಾದ ಕಾಮಿಡಿ ಕಿಲಾಡಿಗಳು ಮತ್ತು ಡಾನ್ಸ್ ಕರ್ನಾಟಕ ಡಾನ್ಸ್​ನ ಹೊಸ ಸಂಚಿಕೆಗಳು ಪ್ರಸಾರವಾಗಿದ್ದು, ವೀಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

ABOUT THE AUTHOR

...view details