ಕನ್ನಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಧಾರಾವಾಹಿಗಳು ಮತ್ತು ಸಿನಿಮಾಗಳು ಡಬ್ ಆಗುತ್ತಿವೆ. ಅವು ಪ್ರೇಕ್ಷಕರಿಗೆ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೇ ಧಾರಾವಾಹಿಗಳು, ಸಿನಿಮಾಗಳು ಡಬ್ ಆಗುತ್ತಿವೆ.
ಇಂದು ಒಂದೇ ದಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ 2018ರಲ್ಲಿ ಹಿಂದಿಯಲ್ಲಿ ಪ್ರಸಾರವಾಗಿದ್ದ ‘ದೇವೋಂಕ ದೇವ್ ಮಹಾದೇವ್’ ಈಗ ಕನ್ನಡದಲ್ಲಿ ‘ಓಂ ನಮಃ ಶಿವಾಯ’ ಆಗಿ ಬರುತ್ತಿದೆ. ಮತ್ತೊಂದು ತೆಲುಗು ಧಾರಾವಾಹಿ ‘ಕಥಲೋ ರಾಜಕುಮಾರಿ’ ಈಗ ಕನ್ನಡದಲ್ಲಿ ಡಬ್ ಆಗಿ ‘ಕಥೆಯ ರಾಜಕುಮಾರಿ’ ಎಂದು ಬದಲಾಗಿ ಮೂಡಿ ಬರುತ್ತಿದೆ.
ಇದಲ್ಲದೇ ಕೆಲವೇ ದಿವಸಗಳಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಸಿಯಾ ಕಾ ರಾಮ್’ ಧಾರಾವಾಹಿ ಕನ್ನಡದಲ್ಲಿ ಡಬ್ ಆಗಿ ಮೂಡಿಬರಲಿದೆ. ಇದರಲ್ಲಿ ನಟ ಜೆ ಕೆ ಅಭಿನಯಿಸಿದ್ದಾರೆ.
ಸಿಯಾ ಕ ರಾಮ್ 2015 ನವೆಂಬರ್ನಿಂದ ನವೆಂಬರ್ 2016 ರ ವರೆಗೆ ಪ್ರಸಾರ ಆಗಿತ್ತು. ಕನ್ನಡದ ನಟ ಜೆ ಕೆ ಅವರಿಗೆ ಈ ಧಾರಾವಾಹಿ ಹೊಸ ವೇದಿಕೆ ಸೃಷ್ಟಿ ಮಾಡಿಕೊಟ್ಟಿತ್ತು. ಈ ‘ಸಿಯಾ ಕ ರಾಮ್’ ಧಾರಾವಾಹಿ ಅನೇಕ ಭಾಷೆಗಳಲ್ಲಿ ಈಗಾಗಲೇ ಡಬ್ ಆಗಿದೆ. ಜೆ ಕೆ ರಾವಣನಾಗಿ ಅಬ್ಬರಿಸಿದ್ದಾರೆ. ಮದಿರಾಕ್ಷಿ ಮಂಡಲ್ ಸೀತೆ ಆಗಿ, ಆಶಿಷ್ ಶರ್ಮಾ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಲ್ ಸಿಂಹ ಈ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದಾರೆ.