ಕೆಲವು ದಿನಗಳ ಹಿಂದೆಯಷ್ಟೇ ರಂಜನಿ ರಾಘವನ್ ಅವರು ವೆಬ್ ಸೈಟ್ಗೆ ವಾರಕ್ಕೊಂದು ಸಣ್ಣ ಕತೆ ಬರೀತಿದ್ದೀನಿ ಎಂದು ಹೇಳಿ ಸುದ್ದಿಯಾಗಿದ್ದರು. ಇದೀಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಹೌದು, ಸಾಮಾನ್ಯವಾಗಿ ವೀಕ್ಷಕರಿಗೆಲ್ಲಾ ರಂಜನಿ ಅಂದರೆ ಅವರ ಟ್ರೆಡಿಷನಲ್ ಲುಕ್ ಕಣ್ಮುಂದೆ ಬರುತ್ತದೆ. ಆದರೆ, ಈ ಬಾರಿ ಅವರು ಮಾಡರ್ನ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ರಂಜನಿ ಈ ರೀತಿ ಮಾಡರ್ನ್ ಡ್ರೆಸ್ ಹಾಕಿರುವುದು ಯಾವುದೋ ಫೋಟೋ ಶೂಟ್ಗಾಗಿ ಅಲ್ಲ, ಬದಲಿಗೆ ಕನ್ನಡತಿ ಧಾರಾವಾಹಿಯಲ್ಲಿ ಬರುವ ದೃಶ್ಯವೊಂದಕ್ಕಾಗಿ.
ಇನ್ ಸ್ಟಾಗ್ರಾಂನಲ್ಲಿ ರಂಜನಿ ಈ ಫೋಟೋ ಹಾಕುತ್ತಿದ್ದಂತೆ ಅವರ ಅಭಿಮಾನಿಗಳಿಂದ ಕಮೆಂಟ್ಸ್, ಲೈಕ್ಸ್ ಸುರಿಮಳೆಯೇ ಹರಿದುಬರುತ್ತಿದೆ. ಸದ್ಯ ಪ್ರತಿಯೊಬ್ಬರು ರಂಜನಿ ಅವರ ಮಾಡರ್ನ್ ಲುಕ್ ನೋಡಿ ಫಿದಾ ಆಗಿದ್ದಾರೆ. ರಂಜನಿ ಈ ಫೋಟೋ ಅಪ್ಲೋಡ್ ಮಾಡಿ, ಕನ್ನಡತಿ ಧಾರಾವಾಹಿಯಲ್ಲಿ ಈ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಒಂದು ದಿನದ ಹಿಂದೆ ಸುಳಿವು ನೀಡಿದ್ದರು. ಆದರೆ, ಕನ್ನಡತಿ ಧಾರವಾಹಿ ವೀಕ್ಷಕರಿಗೆ ರಂಜನಿ ಈ ಡ್ರೆಸ್ ಯಾಕೆ ಹಾಕಿದ್ದಾರೆ ಎಂಬ ಚಿಕ್ಕ ಸುಳಿವು ಆಗಲೇ ಸಿಕ್ಕಿತ್ತು.