ಕರ್ನಾಟಕ

karnataka

ETV Bharat / sitara

ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್​ರ 'ಕತೆ ಡಬ್ಬಿ' ಬಿಡುಗಡೆ - ಬುಕ್ ಹಬ್ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕಿರುತರೆ ನಟಿ ರಂಜನಿಯವರ ಬಹು ನಿರೀಕ್ಷಿತ 'ಕತೆ ಡಬ್ಬಿ' ಕಥಾ ಸಂಕಲನ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಬಹುರೂಪಿ ಬುಕ್ ಹಬ್ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಕಲನ ರಿಲೀಸ್​ ಆಗಿದೆ.

Serial actress Ranjani raghavan s first story collection released
ನಟಿ ರಂಜನಿ ರಾಘವನ್ ಅವರ 'ಕತೆ ಡಬ್ಬಿ' ಕಥಾ ಸಂಕಲನ ಬಿಡುಗಡೆ

By

Published : Sep 30, 2021, 11:26 AM IST

ಬೆಂಗಳೂರಿನಲ್ಲಿ ಬಹುರೂಪಿ ಬುಕ್ ಹಬ್ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಿರುತರೆ ನಟಿ ರಂಜನಿಯವರ ಚೊಚ್ಚಲ‌ ಕೃತಿ ಲೋಕಾರ್ಪಣೆಗೊಂಡಿತು‌.

ನಟಿ ರಂಜನಿ ರಾಘವನ್

ಧಾರಾವಾಹಿ‌ ಮೂಲಕ ನಟಿಯಾಗಿ ಪರಿಚಯಗೊಂಡ ರಂಜನಿ, ಇದೀಗ ತಮ್ಮ ಬರಹಗಳ ಮೂಲಕ ಯುವ ಜನಾಂಗವನ್ನು ಓದು ಮತ್ತು ಬರಹಕ್ಕೆ ಪ್ರೇರೇಪಿಸಿದ್ದಾರೆ. ತಮಗೆ ಅನಿಸಿದ್ದನ್ನು, ತಾವು ಕಂಡಿದ್ದನ್ನು ಕತೆಯನ್ನಾಗಿಸಿದ್ದಾರೆ.

ಕತೆ ಡಬ್ಬಿಯಲ್ಲಿ ಹದಿನಾರು ಕತೆಗಳಿವೆ. ಪ್ರಸ್ತುತ ಸನ್ನಿವೇಶಗಳಿಗೆ ಸನಿಹವೆನಿಸುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮುಳುಗುತ್ತಿರುವ ಇಂದಿನವರಿಗೆ ಈ ಕತೆ ಡಬ್ಬಿ ಬದಲಾವಣೆ ತರಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಬರೆಯುವ ಆಶಯವಿದೆ ಎನ್ನುತ್ತಾರೆ ಲೇಖಕಿ ರಂಜನಿ ರಾಘವನ್.

ಇದನ್ನೂ ಓದಿ: ಇಂದು 'ಕತೆ ಡಬ್ಬಿ' ತೆಗೆಯಲಿದ್ದಾರೆ ನಟಿ ರಂಜನಿ ರಾಘವನ್

ABOUT THE AUTHOR

...view details