ಡ್ಯಾನ್ಸ್ ಪ್ರೇಮಿಗಳಿಗೊಂದು ಗುಡ್ ನ್ಯೂಸ್. ಖಾಸಗಿ ವಾಹಿನಿಯಲ್ಲಿ ಖ್ಯಾತ ಕಾರ್ಯಕ್ರಮ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಸೀಸನ್ 2 ಜುಲೈ 20 ರಿಂದ ಆರಂಭವಾಗಲಿದೆ. ವಿಶೇಷ ಎಂದರೆ ಈ ಬಾರಿ ಸೀಸನ್ನಲ್ಲಿ ವಾಹಿನಿಯ ಪ್ರಮುಖ ಧಾರಾವಾಹಿಗಳ ತಾರೆಯರು ಭಾಗವಹಿಸಲಿದ್ದಾರೆ.
ಈ ಬಾರಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ನಲ್ಲಿ ಧಾರಾವಾಹಿ ಪಾತ್ರಧಾರಿಗಳ ಝಲಕ್ - undefined
ಈ ಬಾರಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ನಲ್ಲಿ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳು ಸ್ಫರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ. ಇದೇ ಶನಿವಾರದಿಂದ ಕಾರ್ಯಕ್ರಮ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.

ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿಹಕ್ಕಿ , ರಾಧಾಕಲ್ಯಾಣ, ಮಹಾದೇವಿ, ಪಾರು, ಉಗೇ ಮಾದೇಶ್ವರ, ಸರಿಗಮಪ, ಡ್ರಾಮಾ ಜೂನಿಯರ್ಸ್ ಹಾಗೂ ಕಾಮಿಡಿ ಕಿಲಾಡಿಗಳ ತಂಡಗಳಿಂದ ಹಲವು ಮಂದಿ ಭಾಗವಹಿಸಿ ತಮ್ಮ ನೃತ್ಯದಿಂದ ಪ್ರೇಕ್ಷಕರನ್ನು ಮನಸೂರೆಗೊಳಿಸಲಿದ್ದಾರೆ. ಧಾರಾವಾಹಿ ಪಾತ್ರಧಾರಿಗಳಾದ ಅನಿಕಾ, ಪ್ರೀತಮ್, ವಿಕ್ಕಿ, ಅದಿತಿ, ಪ್ರಶಾಂತ್, ನೇತ್ರ, ಸುಬ್ಬು, ಪ್ರಣತಿ ಹನುಮಂತು, ಸೂರಜ್, ಮಿಂಚು, ಬರ್ಕತ್ ಆಲಿ, ಲೋಕೇಶ್, ಮಂಥನ, ವಿವೇಕ್, ಹಿರಣ್ಮಯಿ, ಅನುಪ್, ಡಿಂಪನಾ, ಅನುರಾಗ್, ಪರ್ಣಿಕ ,ಪ್ರೇಕ್ಷಿತ, ಅನ್ವಿಷ, ನಂದಿತಾ, ಅನುಪಮಾ ಸೇರಿದಂತೆ ಹಲವು ಮಂದಿ ಭಾಗವಹಿಸಲಿದ್ದಾರೆ.
ಇದರಲ್ಲಿ ಪ್ರಮುಖವಾಗಿ ನಿರೂಪಕಿ ಅನುಪಮಾ ಹಾಗೂ ಸರಿಗಮಪ ಸೀಸನ್ 15ರ ಹನುಮಂತು ಭಾಗವಹಿಸುತ್ತಿರುವುದು ವಿಶೇಷ. ಕಳೆದ ಬಾರಿಯಂತೆ ಈ ಬಾರಿಯೂ ತೀರ್ಪುಗಾರರಾಗಿ ನಟಿ ರಕ್ಷಿತಾ, ನಟ ವಿಜಯರಾಘವೇಂದ್ರ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದ್ದಾರೆ. ಎಂದಿನಂತೆ ಅನುಶ್ರೀ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30 ಕ್ಕೆ ಜೀ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.