ಕರ್ನಾಟಕ

karnataka

ETV Bharat / sitara

ಸೆಲ್ಫಿ ತೆಗೆಸಿಕೊಂಡ ಮಾತ್ರಕ್ಕೆ ಮದುವೆ ಆಗೋಕೆ ಆಗುತ್ತಾ ? : ಕಿರುತೆರೆ ನಟ ರಾಜೇಶ್

ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸಹನಟ ಅಖಿಲ್ ಹೆಸರಿನ ಪಾತ್ರದಲ್ಲಿ ರಾಜೇಶ್ ನಟಿಸುತ್ತಿದ್ದಾರೆ. ನಿನ್ನೆಯಷ್ಟೆ ಈತನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿತ್ತು.

agni

By

Published : Feb 23, 2019, 1:33 PM IST

Updated : Feb 23, 2019, 3:41 PM IST

ಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣದಲ್ಲಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿರುವಕಿರುತೆರೆ ನಟ ರಾಜೇಶ್ ಧ್ರವ, ಇಂದು ವಿಚಾರಣೆಗಾಗಿ ತಾಯಿ ಮಂಗಳ ಭಟ್ ಹಾಗೂ ವಕೀಲರ ಜೊತೆ ಬಸವನಗುಡಿ‌ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿದ್ದರು.

ಇನ್​ಸ್ಪೆಕ್ಟರ್ ಸತ್ಯವತಿ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಈ ವೇಳೆ 'ನನ್ನ ಮೇಲೆ ಅವಳು (ಪತ್ನಿ) ಮಾಡಿರುವ ಆರೋಪ ಸುಳ್ಳು. ನಾನು ಮಾತನಾಡೋರಜೊತೆಯೆಲ್ಲಾ ಸಂಬಂಧ ಕಲ್ಪಿಸುತ್ತಿದ್ದಾಳೆ .ಚೆನ್ನಾಗಿ ಮಾತನಾಡಿದ ತಕ್ಷಣ ಅಫೇರ್ ಅಂತ ಕತೆ ಕಟ್ಟಿದ್ದಾಳೆ. ನಾನು 2013 ರಲ್ಲೇ ಮದುವೆಯಾಗಿದ್ದೆ. ಆ ನಂತರ ಕೆಲವು ಕಾರಣಗಳಿಂದ ದೂರವಾಗಿದ್ದೇವು. 2017 ರಲ್ಲೇ ವಿಚ್ಛೇದನ ಕೋರಿ ಅರ್ಜಿ ಹಾಕಿದ್ದೆ. ಆದರೆ ಆಗ ಆಕೆ ಯಾವುದೇ ಕಾರಣ ನೀಡಿರಲಿಲ್ಲ‌. ಈಗ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾರೆ ಅಂತಾ ಹೇಳ್ತಿದ್ದಾಳೆ.

ಕಿರುತೆರೆ ನಟ ರಾಜೇಶ್

ನಾನು ಯಾರನ್ನು ಮದುವೆಯಾಗಲುಮುಂದಾಗಿಲ್ಲ. ಸೆಲ್ಫಿತೆಗೆದುಕೊಂಡ ಮಾತ್ರಕ್ಕೆಮದುವೆಯಾಗಲು ಹೊರಟ್ಟಿದ್ದೆ ಅನ್ನೋದು ಎಷ್ಟು ಸರಿ ? ನಂದು ಮದುವೆಯಾಗಿಲ್ಲ ಅಂತಾ ಯಾವತ್ತು ಹೇಳಿಕೊಂಡಿಲ್ಲ. ಟಿವಿಯಲ್ಲಿ ನನ್ನ ಪೋಟೋ ಮಾತ್ರ ತೋರಿಸಲಾಗುತ್ತಿದೆ. ಆಕೆಯದ್ದು ತೋರಿಸುತ್ತಿಲ್ಲ. ನನ್ನನ್ನುಎಲ್ಲಾ ಕಡೆ ಬ್ಲಾಕ್ ಮಾಡಿದ್ದಾಳೆ. ನನಗೂ ಅವಳಿಗೂ ಸಂಪರ್ಕವಿಲ್ಲಎಂದು ಇನ್ ಸ್ಪೆಕ್ಟರ್ ಮುಂದೆ ಹೇಳಿಕೆ ನೀಡಿದ್ದಾರಂತೆ.

ಇನ್ನು ಮಗನ ಹೇಳಿಕೆಗಳಿಗೆತಾಯಿ ಮಂಗಳಾ ಭಟ್ ಸಾಥ್ ನೀಡಿದ್ದು, ನನ್ನ ಮಗನ ಹೆಸರಿಗೆ ಮಸಿ ಬಳಿಯಬೇಕೆಂದು ಈ ರೀತಿ ಮಾಡ್ತಿದ್ದಾಳೆ. ನಮ್ಮ ಬಳಿ ಕೆಲವು ಬಾರಿ ಬಂದು ನನ್ನ ಮಗನನ್ನ ಮದುವೆ ಆಗೊದಾಗಿ ಹೇಳಿದ್ದಳು. ಧಾರವಾಡದ ನಮ್ಮ ಮನೆಗೂ ಹಲವು ಬಾರಿ ಬರುತ್ತಿದ್ದಳು. ಮಗನ ಫ್ರೆಂಡ್ ಇರಬಹುದು ಅದಕ್ಕೆ ಬರ್ತಿದ್ದಾರೆ ಅಂದುಕೊಂಡಿದ್ದೆ.ಆದರೆ ಈಗ ನನ್ನ ಮಗನನ್ನ ಮದುವೆ ಆಗಿದ್ದೀನಿ ಅಂತ ಸುಳ್ಳು ಆರೋಪ ಮಾಡ್ತಿದ್ದಾಳೆ. ನಮ್ಮ ಕುಟುಂಬವನ್ನ ನನ್ನ ಮಗನೇ ನೋಡಿಕೊಳ್ತಿದ್ದಾನೆ ಎಂದು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

Last Updated : Feb 23, 2019, 3:41 PM IST

ABOUT THE AUTHOR

...view details