ಕರ್ನಾಟಕ

karnataka

ETV Bharat / sitara

ಆಕಾಶದೀಪ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಂ ಬ್ಯಾಕ್ ಮಾಡಿದ ಮನೆದೇವರು ಖ್ಯಾತಿಯ ಜಯ್ ಡಿಸೋಜಾ - ಮನೆದೇವ್ರು ಧಾರಾವಾಹಿಯ ನಟಿಸಿದ್ದ ನಟ ಜಯ್ ಡಿಸೋಜ

ನಟ ಜಯ್ ಡಿಸೋಜಾ ಈ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆದೇವರು ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದರು. ಬಳಿಕ ತೆಲುಗು ಧಾರವಾಹಿಗಳಲ್ಲಿ ಮುಖ ಮಾಡಿದ್ದರು. ಇದೀಗ ಮತ್ತೆ ಕನ್ನಡ ಕಿರುತೆರೆಗೆ ಹೊಂತಿರುಗಿದ್ದು, ಹೊಸ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಜಯ್ ಡಿಸೋಜ
Serial Actor Jay D'Souza

By

Published : Jan 16, 2021, 11:36 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆದೇವರು ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಜಯ್ ಡಿಸೋಜ ಅವರು ಮುಂದೆ ಪರಭಾಷೆಯ ಕಿರುತೆರೆಯಲ್ಲಿ ಕಾಣಿಸಿಕೊಂಡರು. ತೆಲುಗಿನ ಪವಿತ್ರ ಬಂಧನಂ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿರುವ ಡಿಸೋಜ ಇದೀಗ ಕನ್ನಡ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ.

ನಟ ಜಯ್ ಡಿಸೋಜ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಆಕಾಶದೀಪ'ದಲ್ಲಿ ನಾಯಕ ಆಕಾಶ್ ಆಗಿ ಜಯ್ ಡಿಸೋಜಾ ನಟಿಸಲಿದ್ದಾರೆ. ಮೂರು ವರ್ಷದ ನಂತರ ಮತ್ತೆ ಕನ್ನಡ ಕಿರುತೆರೆಗೆ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ನಟ ಜಯ್ ಡಿಸೋಜ

ಬರೋಬ್ಬರಿ ಮೂರು ವರ್ಷದ ನಂತರ ಮತ್ತೆ ಕನ್ನಡ ಕಿರುತೆರೆಗೆ ಬರುತ್ತಿರುವುದು ನಿಜವಾಗಿಯೂ ಖುಷಿ ತಂದಿದೆ. ಅಂದ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಾನು ಕನ್ನಡ ಕಿರುತೆರೆಗೆ ಮರಳಬೇಕು. ಕನ್ನಡ ಧಾರಾವಾಹಿಯಲ್ಲಿ ನಟಿಸಬೇಕು ಎಂದು ಯೋಚಿಸತ್ತಿದ್ದೆ. ಆದರೆ, ಉತ್ತಮ ಕಥೆ ಸಿಗಲಿಲ್ಲ. ಮಾತ್ರವಲ್ಲ ತೆಲುಗಿನಲ್ಲಿ ನಟಿಸುತ್ತಿದ್ದ ಕಾರಣ ಇದ್ದಕ್ಕಿದ್ದಂತೆ ಅಲ್ಲಿಂದ ಬಿಟ್ಟು ಬರಲು ಸಾಧ್ಯವಿಲ್ಲ. ಆದರೆ ಇದೀಗ ಮೂರು ವರ್ಷದ ನಂತರ ಇದೀಗ ಒಂದೊಳ್ಳೆ ಕಥೆಯ ಮೂಲಕ ನಿಮ್ಮ ಮುಂದೆ ಬರುತ್ತಿದ್ದೇನೆ ಎಂದಿದ್ದಾರೆ.

ನಟ ಜಯ್ ಡಿಸೋಜಾ

ಓದಿ: ನಟಿ ಸುಧಾರಾಣಿಗೆ ಪಿತೃ ವಿಯೋಗ

ಆಕಾಶದೀಪ ಧಾರಾವಾಹಿಯಲ್ಲಿ ಜಯ್ ಡಿಸೋಜಾ ಅವರು ಕುರುಡನ ಪಾತ್ರದಲ್ಲಿ ನಟಿಸಲಿದ್ದಾರೆ. ತುಂಬಾ ಸವಾಲಿನಿಂದ ಕೂಡಿದ ಈ ಪಾತ್ರ ಭಿನ್ನವಾಗಿರುವ ಕಾರಣಕ್ಕೆ ಜಯ್ ಅವರು ಇದನ್ನು ಒಪ್ಪಿಕೊಂಡಿದ್ದಾರೆ.

ABOUT THE AUTHOR

...view details