ಕರ್ನಾಟಕ

karnataka

ETV Bharat / sitara

ಧಾರಾವಾಹಿ ಮುಕ್ತಾಯವಾಗುತ್ತಿರುವುದಕ್ಕ ಬೇಸರವಿದೆ ಎಂದ ಐಶ್ವರ್ಯಾ ಬಸ್ಪುರೆ - ಐಶ್ವರ್ಯಾ ಬಸ್ಪುರೆ

ಕುಟುಂಬದೊಂದಿಗೆ ಇದ್ದ ಭಾವನೆ ಈ ತಂಡ ತಂದಿದೆ. ನಾನು ಕ್ಯಾಮೆರಾ ಹಾಗೂ ಸೆಟ್‌ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಹಾಗೂ ಖಳನಾಯಕಿ ಮಾಯಾ ಪಾತ್ರದ ಅವಕಾಶ ನೀಡಿದ್ದಕ್ಕಾಗಿ ಶ್ರುತಿ ನಾಯ್ಡು ಅವರಿಗೆ ಧನ್ಯವಾದ..

serial actor Ishwarya baspur
ಧಾರಾವಾಹಿ ಮುಕ್ತಾಯವಾಗುತ್ತಿರುವುದಕ್ಕ ಬೇಸರವಿದೆ ಎಂದ ಐಶ್ವರ್ಯಾ ಬಸ್ಪುರೆ

By

Published : Dec 2, 2020, 2:03 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಾರೇ ನೀ ಮೋಹಿನಿ' ಧಾರಾವಾಹಿ ತಮಿಳಿನ ಯಾರಡೆ ನೀ ಮೋಹಿನಿ ಧಾರಾವಾಹಿಯ ರಿಮೇಕ್ ಆಗಿದ್ದು, ಸದ್ಯದಲ್ಲಿಯೇ ಈ ಧಾರಾವಾಹಿ ಅಂತ್ಯಗೊಳ್ಳಲಿದೆ. ಯಾರೇ ನೀ ಮೋಹಿನಿಯಲ್ಲಿ ಖಳನಾಯಕಿ ಮಾಯಾಳಾಗಿ ನಟಿಸಿರುವ ಐಶ್ವರ್ಯಾ ಬಸ್ಪುರೆ ಇಷ್ಟು ದಿನ ಪ್ರೋತ್ಸಾಹಿಸಿದ ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.

ಕಿರುತೆರೆ ನಟಿ ಐಶ್ವರ್ಯಾ ಬಸ್ಪುರೆ
'ಯಾರೇ ನೀ ಮೋಹಿನಿ' ಧಾರಾವಾಹಿಯ ಬಗ್ಗೆ ನಾನು ಮಿಶ್ರ ಭಾವನೆಗಳನ್ನು ಹೊಂದಿದ್ದೇನೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಈ ಧಾರಾವಾಹಿಯು ಇತ್ತೀಚೆಗಷ್ಟೇ 900 ಸಂಚಿಕೆಗಳನ್ನು ಪೂರೈಸಿತ್ತು. ಆದರೆ, ಇದೀಗ ಧಾರಾವಾಹಿ ಮುಗಿಯುತ್ತಿರುವುದಕ್ಕೆ ಬೇಸರವೂ ಇದೆ. ಕಥೆ ಅಂತಿಮ ಹಂತ ತಲುಪಿದೆ. ಇಂತಹ ತಂಡದೊಂದಿಗೆ ಕೆಲಸ ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ.
ಕಿರುತೆರೆ ನಟಿ ಐಶ್ವರ್ಯಾ ಬಸ್ಪುರೆ

ಮಾತ್ರವಲ್ಲ ಕುಟುಂಬದೊಂದಿಗೆ ಇದ್ದ ಭಾವನೆ ಈ ತಂಡ ತಂದಿದೆ. ನಾನು ಕ್ಯಾಮೆರಾ ಹಾಗೂ ಸೆಟ್‌ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಹಾಗೂ ಖಳನಾಯಕಿ ಮಾಯಾ ಪಾತ್ರದ ಅವಕಾಶ ನೀಡಿದ್ದಕ್ಕಾಗಿ ಶ್ರುತಿ ನಾಯ್ಡು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ ಐಶ್ವರ್ಯಾ.

ಕಿರುತೆರೆ ನಟಿ ಐಶ್ವರ್ಯಾ ಬಸ್ಪುರೆ
ಶ್ರುತಿ ನಾಯ್ಡು ನಿರ್ದೇಶನ ಹೊಂದಿರುವ ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಬೆಳ್ಳಿ ತನ್ನ ಮಾವ ಮುತ್ತುವನ್ನು ಪ್ರೀತಿ ಮಾಡುತ್ತಾಳೆ. ಆದರೆ, ಮುತ್ತು ಮತ್ತು ಬೆಳ್ಳಿಯ ಮದುವೆಗೆ ತುಂಬಾ ಅಡಚಣೆಗಳು ಉಂಟಾಗುತ್ತದೆ. ಈ ವೇಳೆ ಮುತ್ತುವಿನ ಸತ್ತುಹೋದ ಹೆಂಡತಿ ಚಿತ್ರಾ ಮೋಹಿನಿಯ ರೂಪದಲ್ಲಿ ಬಂದು ಬೆಳ್ಳಿಯನ್ನು ಮದುವೆಯಾಗುವಂತೆ ಮಾಡುತ್ತಾಳೆ.
ಕಿರುತೆರೆ ನಟಿ ಐಶ್ವರ್ಯಾ ಬಸ್ಪುರೆ

ಜೊತೆಗೆ ಆಸ್ತಿಗಾಗಿ ತನ್ನನ್ನು ಸಾಯಿಸಿದ ಮುತ್ತುವಿನ ಮಲತಾಯಿ ಮೇಲೆ ಚಿತ್ರಾ ಸೇಡು ತೀರಿಸಿಕೊಳ್ಳುವ ಕಥಾ ಹಂದರವನ್ನು ಈ ಧಾರವಾಹಿ ಹೊಂದಿದ್ದು, ಇದೀಗ ಮುಕ್ತಾಯಗೊಳ್ಳುತ್ತಿರುವುದು ಬೇಸರದ ಸಂಗತಿ ಎಂದಿದ್ದಾರೆ.

ABOUT THE AUTHOR

...view details