ಕರ್ನಾಟಕ

karnataka

ETV Bharat / sitara

ವೆಬ್ ಸೀರೀಸ್ ಪ್ರಕರಣದಲ್ಲಿ ಏಕ್ತಾ ಕಪೂರ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ - ಏಕ್ತಾ ಕಪೂರ್ ವೆಬ್ ಸೀರೀಸ್ "XXX ಸೀಸನ್ 2"

ಏಕ್ತಾ ಕಪೂರ್ ನಿರ್ಮಾಣದ ವೆಬ್ ಸೀರೀಸ್ "XXX ಸೀಸನ್ 2"ನಲ್ಲಿ ಆಕ್ಷೇಪಾರ್ಹ ವಿಷಯವಿದೆ ಎಂದು ಆರೋಪಿಸಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಏಕ್ತಾ ಕಪೂರ್​ಗೆ ಮಧ್ಯಂತರ ರಕ್ಷಣೆ ನೀಡಿದೆ.

ektha
ektha

By

Published : Dec 17, 2020, 9:16 PM IST

ನವದೆಹಲಿ:ಟಿವಿ ನಿರ್ಮಾಪಕಿ ಏಕ್ತಾ ಕಪೂರ್ ಅವರ ವೆಬ್ ಸೀರೀಸ್ "XXX ಸೀಸನ್ 2"ನಲ್ಲಿ ಆಕ್ಷೇಪಾರ್ಹ ವಿಷಯವಿದೆ ಎಂದು ಆರೋಪಿಸಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಏಕ್ತಾ ಕಪೂರ್​ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಕಪೂರ್‌ಗೆ ಮಧ್ಯಂತರ ರಕ್ಷಣೆ ನೀಡಿದೆ. ನವೆಂಬರ್‌ನಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ನ್ಯಾಯಪೀಠದಲ್ಲಿ, "XXX ಸೀಸನ್ 2" ವೆಬ್ ಸೀರೀಸ್​ನಲ್ಲಿ ಆಕ್ಷೇಪಾರ್ಹ ವಿಷಯಕ್ಕಾಗಿ ತನ್ನ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಏಕ್ತಾ ಕಪೂರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನಂತರ ಅವರು ಸುಪ್ರೀಂಕೋರ್ಟ್‌ಗೆ ತೆರಳಿದ್ದರು.

ವೆಬ್ ಸೀರೀಸ್​ನಲ್ಲಿ ಅಶ್ಲೀಲ ವಿಚಾರಗಳಿವೆ ಎಂದು ಆರೋಪ ಹೊರಿಸಿ ಕಪೂರ್ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

'XXX ಅನ್ಸೆನ್ಸರ್ಡ್ ಸೀಸನ್ 2' ಸೀರೀಸ್​ ಅಶ್ಲೀಲವಾಗಿದ್ದು, ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿದೆ. ಜೊತೆಗೆ ಸೈನ್ಯವನ್ನು ಅವಮಾನಿಸಿದೆ ಎಂದು ದೂರಿನಲ್ಲಿ ಆರೋಪಿಸಿಲಾಗಿದೆ.

ABOUT THE AUTHOR

...view details