ಜೀ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ 17 ನೇ ಸೀಸನ್ ಸದ್ಯದಲ್ಲೇ ಪ್ರಸಾರವಾಗುತ್ತಿದೆ. ಲಾಕ್ ಡೌನ್ನಿಂದಾಗಿ ಚಿತ್ರೀಕರಣ ಮಾಡಲಾಗದೆ ಸರಿಗಮಪ ಪ್ರಸಾರ ನಿಲ್ಲಿಸಿತ್ತು.
ಸರಿಗಮಪ ಸೀಸನ್-17 ಪ್ರೋಮೋ ಬಿಡುಗಡೆ...ಶೀಘ್ರದಲ್ಲೇ ಕಾರ್ಯಕ್ರಮ ಪ್ರಸಾರ - Sarigamapa season 17 promo released
ಸಂಗೀತಪ್ರಿಯರ ಮೆಚ್ಚಿನ ಕಾರ್ಯಕ್ರಮ ಜೀ ಕನ್ನಡದ ಸರಿಗಮಪ ಸೀಸನ್ 17ರ ಪ್ರೋಮೋ ಬಿಡುಗಡೆಯಾಗಿದ್ದು ಕಾರ್ಯಕ್ರಮ ಕೂಡಾ ಶೀಘ್ರವೇ ಪ್ರಸಾರವಾಗಲಿದೆ.
ಈಗ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಆರಂಭವಾಗಿದ್ದು ಶೀಘ್ರದಲ್ಲೇ ಕಾರ್ಯಕ್ರಮ ಕಿರುತೆರೆಯಲ್ಲಿ ಪ್ರಸಾರ ಆರಂಭಿಸಲಿದೆ ಎಂದು ಕಾರ್ಯಕ್ರಮದ ನಿರೂಪಕಿ ಅನುಶ್ರೀ ಹೇಳಿದ್ದರು. ಇದೀಗ ಕಾರ್ಯಕ್ರಮದ ಹೊಸ ಪ್ರೋಮೋವನ್ನು ವಾಹಿನಿ ಬಿಡುಗಡೆ ಮಾಡಿದೆ. ಪ್ರೋಮೋದಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ಬಗ್ಗೆ ಅರಿವು ಮೂಡಿಸಲಾಗಿದೆ.
ಪ್ರೋಮೋದಲ್ಲಿ ಅರ್ಜುನ್ ಜನ್ಯಾ, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಅನುಶ್ರೀ ಹಾಗೂ ನಾದಬ್ರಹ್ಮ ಹಂಸಲೇಖ ಅವರನ್ನು ತೋರಿಸಲಾಗಿದ್ದು ಪ್ರೋಮೋ ಬಹಳ ಗಮನ ಸೆಳಯುತ್ತಿದೆ. ಸಂಗೀತಪ್ರಿಯರು ಕೂಡಾ ತಮ್ಮ ಮೆಚ್ಚಿನ ಕಾರ್ಯಕ್ರಮವನ್ನು ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.