ಇನ್ನೆರಡು ದಿನ ಕಳೆದರೆ ಯುಗಾದಿ ಹಬ್ಬ. ಎಲ್ಲಾ ವಾಹಿನಿಗಳಲ್ಲೂ ಯುಗಾದಿ ಹಬ್ಬದ ವಿಶೇಷ ಮನರಂಜನೆ ಕಾರ್ಯಕ್ರಮಗಳು ಭರಪೂರ ಮನರಂಜನೆಗಳು ವೀಕ್ಷಕರಿಗಾಗಿ ಕಾದಿವೆ. ಖಾಸಗಿ ವಾಹಿನಿ ಆಯೋಜಿಸಿದ್ದ ಯುಗಾದಿ ವಿಶೇಷ ಕಾರ್ಯಕ್ರಮದಲ್ಲಿ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಹಬ್ಬದ ಸಂಭ್ರಮದಲ್ಲಿದ್ದರು. ಆದರೆ, ಈ ಖುಷಿಯ ಕ್ಷಣದ ನಡುವೆಯೂ ಅವರು ಭಾವುಕರಾಗಿದ್ದಾರೆ.
ಹಬ್ಬದ ರಂಗು ಹೆಚ್ಚಿಸಲು ಇಬ್ಬರೂ ನಟಿಯರು ಹಾಡಿ ಕುಣಿದರು. ಇತ್ತೀಚೆಗೆ ಅವರು ಅನುಭವಿಸಿದ ಹಳೇ ನೋವು ಕಾಡದೇ ಬಿಟ್ಟಿಲ್ಲ. ಹಾಗಾಗಿ ಆ ವಿಶೇಷ ಕಾರ್ಯಕ್ರಮದ ವೇದಿಕೆಯಲ್ಲೇ ಅವರು ಕಣ್ಣೀರು ಹಾಕುವಂತಾಗಿದೆ. 'ಜೀವನ ಇಷ್ಟೇ ಅಲ್ಲ. ಆ ಪಾಠವನ್ನು ನಾನು 2020ರಿಂದ ಕಲಿತಿದ್ದೇನೆ. ಇಡೀ ಪ್ರಪಂಚದ ಎದುರು ನಿಂತುಕೊಂಡು ನಾನು ಗಟ್ಟಿಯಾಗಿ ಫೈಟ್ ಮಾಡಬಹುದು. ಆದರೆ ಅಪ್ಪ-ಅಮ್ಮನ ಕಣ್ಣಲ್ಲಿ ನೀರು ನೋಡಿದರೆ ಪ್ರಾಣ ಹೋಗುತ್ತದೆ. ಅದು ನನಗೆ ತುಂಬ ಘಾಸಿ ಮಾಡಿತು ಎಂದು ಕಹಿ ಘಟನೆಯನ್ನು ಮೆಲುಕು ಹಾಕುತ್ತಾ ರಾಗಿಣಿ ಕಂಬನಿ ಸುರಿಸಿದ್ದಾರೆ.