ಕನ್ನಡ ಚಿತ್ರರಂಗದಲ್ಲಿ ಬಿಗ್ ಸ್ಕ್ರೀನ್ ಹಾಗೂ ಸ್ಮಾಲ್ ಸ್ಕ್ರೀನ್ ನಲ್ಲಿ ಮಿಂಚುತ್ತಿರುವ ಸೆಲೆಬ್ರೆಟಿಗಳಿಗೆ ಒಂದೊಂದು ರೀತಿಯ ಕ್ರೇಜ್ ಇರುತ್ತೆ. ಒಬ್ಬರಿಗೆ ಬೈಕ್ ಕ್ರೇಜ್ ಇದ್ರೆ, ಮತ್ತೆ ಕೆಲವರಿಗೆ ಕಾರು ಕ್ರೇಜ್ ಇರುತ್ತೆ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಹಿರಿತೆರೆ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ದುಬಾರಿ ಕಾರುಗಳನ್ನ ಖರೀದಿಸುವ ಮೂಲಕ ತಮ್ಮ ಬಹು ದಿನದ ಕನಸು ನನಸು ಮಾಡಿಕೊಂಡಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಸದ್ಯ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ರಾಜಕುಮಾರ ಹಾಗೂ ಯುವರತ್ನ ಸಿನಿಮಾಗಳನ್ನು ನಿರ್ದೇಶಿಸಿ, ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಫುಲ್ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಾಲ್ಕನೇ ಸಿನಿಮಾದ ಕಥೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.
ಅಂದ ಹಾಗೆ ಸಂತೋಷ್ ಆನಂದ್ ರಾಮ್ ಇತ್ತೀಚಿಗಷ್ಟೆ ದುಬಾರಿ ಬೆಲೆಯ ಬಿಎಂಡಬ್ಲ್ಯೂ 520ಡಿ ಕಾರನ್ನ ಖರೀದಿ ಮಾಡಿದ್ದಾರೆ. ಸಂತೋಷ್ ಆನಂದ್ ರಾಮ್ ಈ ಐಶಾರಾಮಿ ಕಾರನ್ನ ಖರೀದಿಸುವ ವೇಳೆ, ಇಡೀ ಕುಟುಂಬ ಈ ಸುಂದರ ಕ್ಷಣದಲ್ಲಿ ಭಾಗಿಯಾಗಿದೆ.
ಬಿಳಿ ಬಣ್ಣದ ಈ ಐಶಾರಾಮಿ ಕಾರಿನ ಬೆಲೆ ಬರೋಬ್ಬರಿ 80 ಲಕ್ಷದಿಂದ 1 ಕೋಟಿವರೆಗೆ ಇದೆ. ಈ ಮೂಲಕ ಸಂತೋಷ್ ಆನಂದ್ ರಾಮ್ ತಮ್ಮ ಬಹು ದಿನದ ಕನಸನ್ನ ನನಸು ಮಾಡಿಕೊಂಡಿದ್ದಾರೆ.
ನಟ, ನಿರ್ದೇಶಕ ಹಾಗು ನಿರ್ಮಾಪಕ ರಕ್ಷಿತ್ ಶೆಟ್ಟಿ ಇನ್ನು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಚಿತ್ರದ ಬಳಿಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ನಟ, ನಿರ್ದೇಶಕ ಹಾಗು ನಿರ್ಮಾಪಕ ರಕ್ಷಿತ್ ಶೆಟ್ಟಿ. ಸದ್ಯ ಚಾರ್ಲಿ 777 ಹಾಗೂ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಬ್ಯುಸಿಯಾಗಿರೋ ರಕ್ಷಿತ್ ಶೆಟ್ಟಿ ವರಮಹಾಲಕ್ಷ್ಮಿ ಹಬ್ಬದ ದಿನದೊಂದು, ಆಡಿ ಕ್ಯೂ8 ಕಾರು ಖರೀದಿ ಮಾಡಿದರು. ಬ್ಲಾಕ್ ಬ್ಯೂಟಿ ಮುಂದೆ ನಿಂತಿಕೊಂಡು ರಕ್ಷಿತ್ ಶೆಟ್ಟಿ ಪೋಟೋಗೆ ಪೋಸ್ ಕೊಟ್ಟಿದ್ದರು. ಸದ್ಯ ರಕ್ಷಿತ್ ಶೆಟ್ಟಿ ಖರೀದಿಸಿರೋ ಈ ಬ್ಲಾಕ್ ಬ್ಯೂಟಿ ಆಡಿ ಕಾರಿನ ಬೆಲೆ 99 ಲಕ್ಷದಿಂದ 1.26 ಕೋಟಿಯವರೆಗೂ ಇದೆ.
ಇನ್ನು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೆಂಚುರಿ ಬಾರಿಸಿ, ತೆಲುಗು, ತಮಿಳು ಹಾಗೂ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ. ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಕೂಡ ಜನವರಿಯಲ್ಲಿ ಐಶಾರಾಮಿ ರೇಂಜ್ ರೋವರ್ ಸ್ಪೋರ್ಟ್ಸ್ ಮ್ಯಾಟ್ ಕಾರನ್ನ ಖರೀದಿಸಿದರು. ಬ್ಲಾಕ್ ಕಲರ್ ಕಾರು ಖರೀದಿ ಮಾಡಿ ಖುಷಿಯಲ್ಲಿ, ರಶ್ಮಿಕಾ ಮಂದಣ್ಣ ಕ್ಯಾಮಾರಗೆ ಪೋಸ್ ಕೊಟ್ಟಿದ್ದರು. ಈ ಐಶಾರಾಮಿ ಕಾರಿನ ಬೆಲೆ 1 ಕೋಟಿಯಿಂದ 1.30ಕೋಟಿ ರೂಪಾಯಿ.
ಆಡಿ ಕ್ಯೂ 8 ಐಶಾರಾಮಿ ಕಾರ್ ಖರೀದಿಸಿದ ಶೈನ್ ಶೆಟ್ಟಿ ಇನ್ನು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಮಿಂಚುತ್ತಿರುವ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿಗೂ, ಮೊದಲಿನಿಂದಲೂ ಕಾರುಗಳು ಅಂದ್ರೆ ಪಂಚಪ್ರಾಣ. ಸದ್ಯ ಸಿನಿಮಾಗಳಲ್ಲಿ ನಟಿಸ್ತಾ ಇರೋ ಶೈನ್ ಶೆಟ್ಟಿ ಕೂಡ ದುಬಾರಿ ಬೆಲೆಯ. ಆಡಿ ಕ್ಯೂ 8 ಐಶಾರಾಮಿ ಕಾರನ್ನ ಖರೀದಿಸಿದ್ದಾರೆ. ಇದರ ಬೆಲೆ 80 ರಿಂದ 1 ಕೋಟಿ ರೂಪಾಯಿ ಬೆಲೆಯ ಕಾರು ಇದಾಗಿದೆ.
ಶೈನ್ ಶೆಟ್ಟಿ ಬಳಿಕ ಮಾರ್ಚ್ 22 ಸಿನಿಮಾದಲ್ಲಿ ನಟಿಸಿ, ಸದ್ಯ ಕನ್ನಡತಿ ಧಾರಾವಾಹಿ ಮೂಲಕ ಕಿರುತೆರೆ ಮೋಡಿ ಮಾಡ್ತಾ ಇರೋ ನಟ ಕಿರಣ್ ರಾಜ್. ಮಾರ್ಚ್ ತಿಂಗಳಲ್ಲಿ ಕಿರಣ್ ರಾಜ್ ಹೊಸ ಕಾರು ಖರೀದಿ ಖುಷಿ ಪಟ್ಟಿದ್ದಾರೆ. ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಕಾರು ಇದಾಗಿದ್ದು 70 ರಿಂದ 1 ಕೋಟಿ ರೂಪಾಯಿಯ ಬೆಲೆಯ ಕಾರು ಇದಾಗಿದೆ.
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟ ಚಂದು ಗೌಡ ಕೂಡ, ಆಡಿ ಕ್ಯೂ 7 ಕಾರನ್ನು ಖರೀದಿಸಿದ್ದಾರೆ. ಚಂದು ಗೌಡ ಖರೀದಿ ಮಾಡಿರುವ ಆಡಿ ಕ್ಯೂ 7 ಕಾರಿನ ಆರಂಭಿಕ ಬೆಲೆ 70 ಲಕ್ಷದಿಂದ 81 ಲಕ್ಷದವರೆಗೂ ಇದೆ.
ಇನ್ನು ಬಿಗ್ ಬಾಸ್ ಶೋ ಮೂಲಕ ಕರ್ನಾಟಕದ ಜನತೆಗೆ ಪರಿಚಿತರಾದ, ಶಶಿ ಕುಮಾರ್ ಕೂಡ ತಮ್ಮ ಕನಸಿನ ಕಾರನ್ನ ಖರೀದಿಸಿದ್ದಾರೆ. ಅದುವೆ ಮಿನಿ ಕೂಪರ್. ಈ ಕೆಂಪು ಬಣ್ಣದ ಮಿನಿ ಕೂಪರ್ ಬೆಲೆ 1 ಕೋಟಿ ಮೇಲೆ ಇದೆ. ಒಟ್ಟಾರೆ ಸ್ಯಾಂಡಲ್ ವುಡ್ ನ್ನ ಸೆಲೆಬ್ರೆಟಿಗಳ ತಮ್ಮ ಕನಸಿನ ಕಾರನ್ನ ಖರೀದಿಸುವ ಮೂಲಕ, ಸಂಭ್ರಮಿಸಿದ್ದಾರೆ.