ಕೆಲವು ದಿನಗಳ ಹಿಂದೆ ಶಿವನಂಜೇಗೌಡರು ಕೊರೊನಾ ಲಾಕ್ಡೌನ್ ಕುರಿತಾದ ಒಂದು ಹಾಡು ಬರೆದಿದ್ದರು. ಈ ಹಾಡನ್ನು ರಾಕಿ ಸೋನು ಹಾಡಿದ್ದರು. ನಂತರ ಶಿವನಂಜೇಗೌಡ ಅವರಿಗೂ ಕೂಡಾ ಸೋಂಕು ತಗುಲಿ ಸುಮಾರು 10 ದಿನಗಳ ಕಾಲ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇದೀಗ ಶಿವನಂಜೇಗೌಡ ಪರಿಸರಕ್ಕೆ ಸಂಬಂಧಿಸಿದ ಹಾಡೊಂದನ್ನು ಬರೆದಿದ್ದಾರೆ.
ಶಿವನಂಜೇಗೌಡರ ಪರಿಸರ ಗೀತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ಗಣ್ಯರು - Shivananjegowda nature song
2004 ರಲ್ಲಿ ಬಿಡುಗಡೆಯಾದ ಸೀತಾರಾಮ್ ಕಾರಂತ್ ನಿರ್ದೇಶನದ 'ಯಾಹೂ' ಕನ್ನಡ ಸಿನಿಮಾ ಮೂಲಕ ಗೀತ ಸಾಹಿತಿ ಆಗಿ ಜರ್ನಿ ಆರಂಭಿಸಿದ ಶಿವನಂಜೇಗೌಡ ಅವರು ಇದುವರೆಗೂ ಸುಮಾರು 100 ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.
'ಬರಿದಾಗುತ್ತಿದೆ ಬಂಜರಾಗುತ್ತಿದೆ' ಎಂಬ ವಿಡಿಯೋ ಹಾಡನ್ನು ಶಿವನಂಜೇಗೌಡ ಸಿದ್ಧಪಡಿಸಿ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಗೀತೆಯನ್ನು ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ರಾಕಿ ಸೋನು ಈ ಹಾಡಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆಯೇ ಶಿವನಂಜೇಗೌಡರು ಈ ಹಾಡು ರಚಿಸಿದ್ದರು. ಕರ್ನಾಟಕದ ಪ್ರವಾಹದ ವೇಳೆ ಈ ವಿಡಿಯೋ ತಯಾರಾಗಬೇಕಿತ್ತಂತೆ. ಆದರೆ ಅದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.
ಈ ಪರಿಸರ ಗೀತೆಗೆ ಶ್ರೀ ನಿರ್ಮಲಾನಂದ ಸ್ವಾಮಿ , ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ನೆನಪಿರಲಿ ಪ್ರೇಮ್, ನಿರ್ದೇಶಕ ಸೀತಾರಾಂ ಕಾರಂತ್, ನಿರ್ದೇಶಕಿ ರೂಪಾ ಅಯ್ಯರ್ ಮತ್ತು ವಿಜಯಲಕ್ಷ್ಮಿ ಸಿಂಗ್, ಡಾ. ಯಲ್ಲಪ್ಪ ರೆಡ್ಡಿ ಪರಿಸರ ತಜ್ಞ, ಜರಗನಹಳ್ಳಿ ಶಿವಶಂಕರ್, ಚಂದನ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಗರುಡ ರಾಮ್ ಅರ್ಜುನ್ ಜನ್ಯ ಹಾಗೂ ಇನ್ನಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.