ಬೆಂಗಳೂರು: ಪುನೀತ್ ಭಾವ ಚಿತ್ರದ ಮುಂದೆ ಶಾಂಪೇನ್ ಬಳಸಿದ ಏಕ್ ಲವ್ ಯಾ (Ek Love Ya) ಚಿತ್ರ ತಂಡದ ವರ್ತನೆ ಖಂಡನೀಯ ಎಂದು ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು (Sa ra Govindu) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್.ಟಿ.ನಗರದಲ್ಲಿ ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಏಕ್ ಲವ್ ಯಾ (Ek Love Ya) ಚಿತ್ರದ ಆಡಿಯೋ ರಿಲೀಸ್ ವೇಳೆ ಪುನೀತ್ ಫೋಟೊ ಮುಂದೆ ಶಾಂಪೇನ್ ಓಪನ್ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಚಿತ್ರರಂಗದವರೇ ಈ ರೀತಿ ಮಾಡಿದರೆ ಏನು? ಹೇಳಬೇಕು.
ಪುನೀತ್ ನಿಧನದಿಂದ ಎಲ್ಲರೂ ದುಃಖದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಭಾವಚಿತ್ರದ ಎದುರು ಚಿತ್ರರಂಗದ ಕೆಲವರ ಈ ರೀತಿಯ ವರ್ತನೆ ಖಂಡನೀಯ. ಇದರಿಂದ ಅಭಿಮಾನಿಗಳಲ್ಲಿ ಆಕ್ರೋಶ ಮೂಡುವುದು ಸಹಜ. ಕೂಡಲೇ ಏಕ್ ಲವ್ ಯಾ ಚಿತ್ರತಂಡದವರು ಕ್ಷಮೆ ಕೇಳಬೇಕು ಎಂದು ಸಾ.ರಾ.ಗೋವಿಂದು (Sa ra Govindu) ಒತ್ತಾಯಿಸಿದ್ದಾರೆ.
ಸಾ.ರಾ ಗೋವಿಂದು ಒತ್ತಾಯಿಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತಾ ಮತ್ತು ರಚಿತಾ ರಾಮ್ ಅಪ್ಪು ಅಭಿಮಾನಿಗಳಲ್ಲಿ ಕ್ಷಮೇ ಕೋರಿದ್ದಾರೆ. ‘ಏಕ್ ಲವ್ ಯಾ (Ek Love Ya) ಚಿತ್ರದ ಆಡಿಯೋ ರಿಲೀಸ್ ವೇಳೆ ಪುನೀತ್ ಫೋಟೊ ಮುಂದೆ ಶಾಂಪೇನ್ ಓಪನ್ ಮಾಡಿದ್ದು ಅಪ್ಪು ಅಭಿಮಾನಿಗಳಲ್ಲಿ ಅಸಮಧಾನ ಉಂಟಾಗಿದಲ್ಲಿ ನನ್ನ ಮತ್ತು ನನ್ನ ಚಿತ್ರತಂಡದಿಂದ ಕ್ಷಮೇಯಾಚಿಸುತ್ತೇವೆ ಎಂದು ರಕ್ಷಿತಾ ಮತ್ತು ರಚಿತಾ ರಾಮ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.