ಕರ್ನಾಟಕ

karnataka

ETV Bharat / sitara

ಟಿಆರ್​ಪಿ ಇಲ್ಲದ ಕಾರಣ ಅರ್ಧಕ್ಕೆ ನಿಂತ ರುಕ್ಕು ಧಾರಾವಾಹಿ! - ಕೆ.ಎಸ್ ರಾಮ್ ಜೀ ನಿರ್ದೇಶನ

ಕೆ.ಎಸ್ ರಾಮ್ ಜೀ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ರುಕ್ಕು ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ. ಟಿಆರ್​ಪಿ ಕಡಿಮೆ ಇರುವ ಕಾರಣದಿಂದ ಸ್ಟಾರ್ ಸುವರ್ಣ ವಾಹಿನಿಯವರೇ ರುಕ್ಕು ಧಾರಾವಾಹಿಯನ್ನು ಮುಕ್ತಾಯಗೊಳಿಸುವ ನಿರ್ಧಾರ ಮಾಡಿದ್ದಾರೆ..

Rukku serial
ರುಕ್ಕು ಧಾರಾವಾಹಿ

By

Published : May 12, 2021, 1:43 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕೆ.ಎಸ್ ರಾಮ್ ಜೀ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ರುಕ್ಕು ಧಾರಾವಾಹಿಯು ಇದೇ ವಾರಾಂತ್ಯದಲ್ಲಿ ಮುಕ್ತಾಯಗೊಳ್ಳುತ್ತಿದೆ.

ಟಿಆರ್​ಪಿ ಕಡಿಮೆ ಇರುವ ಕಾರಣದಿಂದ ಸ್ವತಃ ವಾಹಿನಿಯವರೇ ರುಕ್ಕು ಧಾರಾವಾಹಿಯನ್ನು ಮುಕ್ತಾಯಗೊಳಿಸುವ ನಿರ್ಧಾರ ಮಾಡಿದ್ದಾರೆ.

ಜನವರಿಯಲ್ಲಿ ಆರಂಭವಾದ ರುಕ್ಕು ಧಾರಾವಾಹಿಯು ಇತ್ತೀಚೆಗಷ್ಟೇ ಯಶಸ್ವಿ ನೂರು ಸಂಚಿಕೆ ಪೂರೈಸಿತ್ತು. ಅಕ್ಕ ತಂಗಿಯರ ನಡುವಿನ ಸುಂದರ ಬಾಂಧವ್ಯದ ಕಥಾನಕವನ್ನು ಹೊಂದಿದ ರುಕ್ಕು ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆದಿತ್ತು.

ಕಥಾನಾಯಕಿ ರುಕ್ಕುವಿಗೆ ಕುಟುಂಬವೇ ಸರ್ವಸ್ವ. ಕುಟುಂಬದ ಒಳಿತಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ರುಕ್ಕುವಿಗೆ ನಾಯಕ ಮುರಳಿ ಜೊತೆ ವಿವಾಹ ನಿಶ್ಚಯವಾಗುತ್ತದೆ.

ಅಮ್ಮ ಬಂಗಾರಮ್ಮನ ಮಾತಿನಂತೆ ರುಕ್ಕುವನ್ನು ಮದುವೆಯಾಗಲು ಒಪ್ಪಿಗೆ ಕೊಟ್ಟಿರುವ ಮುರಳಿ ರುಕ್ಕು ತಂಗಿ ರಾಧಿಕಾಳನ್ನು ಪ್ರೀತಿ ಮಾಡುತ್ತಿರುತ್ತಾನೆ.

ರಾಧಿಕಾಳೂ ಅಷ್ಟೇ. ತನ್ನನ್ನು ಜೀವನಕ್ಕಿಂತ ಹೆಚ್ಚು ಪ್ರೀತಿ ಮಾಡುವ ಅಕ್ಕ ರುಕ್ಕುಗೆ ತನ್ನ ಪ್ರಿಯತಮ ಮುರಳಿಯೊಂದಿಗೆ ಮದುವೆ ಎಂದು ತಿಳಿದಾಗ ರಾಧಿಕಾ ಅಕ್ಕನಿಗಾಗಿ ತನ್ನ ಪ್ರೀತಿಯನ್ನು ಬಿಟ್ಟುಕೊಡುತ್ತಾಳೆ.

ಆದರೆ, ಅಮ್ಮನಿಗಾಗಿ ರುಕ್ಕುವನ್ನು ಮದುವೆಯಾದ ಮುರಳಿಗೆ ರಾಧಿಕಾಳ ಮೇಲೆ ಪ್ರೀತಿ ಕಡಿಮೆಯಾಗಿರುವುದಿಲ್ಲ. ಇತ್ತ ಮುರಳಿ ರಾಧಿಕಾಳನ್ನು ಮರೆಯುತ್ತಾನಾ, ರುಕ್ಕುವನ್ನು ಮಡದಿಯನ್ನಾಗಿ ಸ್ವೀಕರಿಸುತ್ತಾನಾ ಎಂಬುದೇ ರುಕ್ಕುವಿನ ಕಥಾಹಂದರ.

ಗ್ಲಾಮರಸ್ ರೋಲ್ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಶೋಭಾ ಶೆಟ್ಟಿ ರುಕ್ಕುವಿಗಾಗಿ ಹಳ್ಳಿ ಹುಡುಗಿ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ಮುಂದೆ ಆಕೆ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ಬಂದಾಗ ರಚನಾ ಗೌಡ ಆ ಪಾತ್ರಕ್ಕೆ ಜೀವ ತುಂಬಿದ್ದರು. ಇನ್ನು ನಾಯಕ ಮುರಳಿ ಆಗಿ ಆರ್ಯನ್ ಅವರು ನಟಿಸಿದ್ದು ಇದೇ ಮೊದಲ ಬಾರಿಗೆ ಅವರು ಕಿರುತೆರೆಯಲ್ಲಿ ಅಭಿನಯಿಸಿದ್ದರು. ರಾಧಿಕಾ ಆಗಿ ವರ್ಷಿಕಾ ನಟಿಸಿದ್ದರು.

ABOUT THE AUTHOR

...view details