ಕರ್ನಾಟಕ

karnataka

ETV Bharat / sitara

'RRR'ಗೆ ಬೈ ಬೈ ಹೇಳಿದ ಡೈಸಿ...ರಾಜಮೌಳಿ ಚಿತ್ರದಿಂದ ಹೊರ ನಡೆದಿದ್ಯಾಕೆ ಬ್ರಿಟನ್ ಬ್ಯೂಟಿ - ಎಡ್ಗರ್​ ಜೋನ್ಸ್

RRR ಶೂಟಿಂಗ್ ಭರದಿಂದ ಸಾಗಿದೆ. ಹೈದರಾಬಾದ್​ನಲ್ಲಿ ಮೊದಲ ಶೆಡ್ಯೂಲ್ಡ್​ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ, ಗುಜರಾತಿಗೆ ಹಾರಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವುವಾಗಲೇ ಚಿತ್ರದಿಂದ ಹಾಲಿವುಡ್ ನಟಿ ಡೈಸಿ ಹೊರ ಹೋಗಿದ್ದಾರೆ.

ಆರ್​ಆರ್​ಆರ್​

By

Published : Apr 6, 2019, 7:16 PM IST

ಸ್ಟಾರ್​ ಡೈರೆಕ್ಟರ್​ ರಾಜಮೌಳಿಗೆ ಬ್ರಿಟನ್ ಬ್ಯೂಟಿ ಡೈಸಿ ಎಡ್ಗರ್​ ಜೋನ್ಸ್ ಶಾಕ್ ನೀಡಿದ್ದಾರೆ. 'RRR' ಚಿತ್ರಕ್ಕೆ ಬೆನ್ನು ತೋರಿಸಿ ಬೈ ಬೈ ಹೇಳಿ ಹೊರ ನಡೆದಿದ್ದಾರೆ.

ಹೌದು, ಭಾರತೀಯ ಚಿತ್ರರಂಗದ ಟ್ಯಾಲೆಂಟೆಡ್​ ನಿರ್ದೇಶಕ ರಾಜಮೌಳಿ 'RRR' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ತಿಂಗಳು ಮಾಧ್ಯಮಗಳ ಎದುರು ಹಾಜರಾಗಿ, ತಮ್ಮ ಪರಿವಾರ( ಸ್ಟಾರ್​ಕಾಸ್ಟ್​)ದ ಮಾಹಿತಿ ಹಂಚಿಕೊಂಡು, ಮತ್ತೇ ಶೂಟಿಂಗ್ ಸೆಟ್​ ಸೇರಿಕೊಂಡಿದ್ದರು. ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿಯೇ ಈ ಚಿತ್ರದಲ್ಲಿ ನಟಿಸಬೇಕಿದ್ದ ಬ್ರಿಟನ್ ನಟಿ ಡೈಸಿ ತಮ್ಮ ಮನಸ್ಸು ಬದಲಿಸಿಕೊಂಡಿದ್ದಾರೆ. 'RRR' ಚಿತ್ರದಲ್ಲಿ ನಾನು ನಟಿಸೋಲ್ಲ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

ನಿನ್ನೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಡೈಸಿ 'ಕೆಲವು ಪರಿಹರಿಸಲಾಗದ ಕೌಟುಂಬಿಕ ಕಾರಣಗಳಿಂದ 'RRR' ಚಿತ್ರದಲ್ಲಿ ನಟಿಸುತ್ತಿಲ್ಲ. ಚಿತ್ರದ ಸ್ಕ್ರಿಪ್ಟ್ ಅದ್ಭುತವಾಗಿದೆ. ನನ್ನ ಪಾತ್ರವೂ ಕೂಡ ಅಷ್ಟೆ ಗಟ್ಟಿತನದಿಂದ ಕೂಡಿತ್ತು. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ' ಎಂದು ಹರಿಸಿದ್ದಾರೆ. 'RRR' ತಂಡ ಕೂಡ ಈ ವಿಷಯನ್ನು ಕನ್ಫರ್ಮ್ ಮಾಡಿದೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ವಿಶ್ ಮಾಡಿದೆ.

ಈ ಸುದ್ದಿ ಟಾಲಿವುಡ್​ ಸಿನಿರಸಿಕರಲ್ಲಿ ದಿಗಿಲು ಮೂಡಿಸಿದೆ. ಇಂಗ್ಲೆಂಡ್ ಚೆಲುವೆಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಇನ್ನು 'RRR' ಚಿತ್ರದಲ್ಲಿ ಜ್ಯೂನಿಯರ್​ ಎನ್​​ಟಿಆರ್​, ರಾಮ್​ ಚರಣ್​, ಬಾಲಿವುಡ್​ ನಟ ಅಜಯ್​ ದೇವಗನ್​, ನಟಿ ಆಲಿಯಾ ಭಟ್​ ನಟಿಸುತ್ತಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟಗಾರ ಕೋಮರಾಮ್ ಭೀಮ ಹಾಗೂ ಸೀತರಾಮರಾಜು ಅವರ ಕುರಿತಾದ ಚಿತ್ರ. 2020 ಜುಲೈ 30 ಈ ಸಿನಿಮಾ ಬಿಡುಗಡೆಯಾಗಲಿದೆ.

ABOUT THE AUTHOR

...view details