ಕರ್ನಾಟಕ

karnataka

ETV Bharat / sitara

'ರೂಮ್ ಬಾಯ್'ಗೆ ಸಾಥ್ ಕೊಟ್ಟ ಡಾಲಿ ಧನಂಜಯ್ - ಲಿಖಿಲ್ ಸೂರ್ಯ

'ಅಪರೇಷನ್ ನಕ್ಷತ್ರ', 'ಲೈಫ್ ಸೂಪರ್', 'ಗ್ರಾಮ' ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿರುವ ಲಿಖಿಲ್ ಸೂರ್ಯ ಅಭಿನಯದ 'ರೂಮ್ ಬಾಯ್' ಸಿನಿಮಾದ ಟೀಸರ್ ಅನ್ನು ಡಾಲಿ ಧನಂಜಯ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

Room Boy
Room Boy

By

Published : Jan 9, 2022, 10:05 AM IST

ಸ್ಯಾಂಡಲ್​ವುಡ್​ನಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಲೇ ಇದೆ. ಒಂದಷ್ಟು ಪ್ರತಿಭಾನ್ವಿತರ ಪರಿಶ್ರಮದಿಂದ ನಿರ್ಮಾಣವಾದ 'ರೂಮ್ ಬಾಯ್' ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ನಟ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ.

ಸಂಭಾಷಣೆಕಾರನಾಗಿ, ಸಹಾಯಕ ನಿರ್ದೇಶಕನಾಗಿ 10ಕ್ಕೂ ಹೆಚ್ಚು ವರ್ಷಗಳ ಅನುಭವವಿರುವ ರವಿ ನಾಗಡದಿನ್ನಿ ನಿರ್ದೇಶನದ ಚೊಚ್ಚಲ ಸಿನಿಮಾ 'ರೂಮ್ ಬಾಯ್' ಟೀಸರ್​ ಅನ್ನು ನಿನ್ನೆ ಡಾಲಿ ಧನಂಜಯ್ ರಿಲೀಸ್ ಮಾಡಿ, ಯುವಪ್ರತಿಭೆಗಳ ಕಾರ್ಯಕ್ಕೆ ಬೆನ್ನುತಟ್ಟಿದ್ದಾರೆ.

ಈ ಹಿಂದೆ 'ಅಪರೇಷನ್ ನಕ್ಷತ್ರ', 'ಲೈಫ್ ಸೂಪರ್', 'ಗ್ರಾಮ' ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿರುವ ಲಿಖಿಲ್ ಸೂರ್ಯ, ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದು, ಬಂಡವಾಳವನ್ನೂ ಹೂಡಿದ್ದಾರೆ. ಲಿಖಿತ್ ಸೂರ್ಯಗೆ ಜೋಡಿಯಾಗಿ ರಕ್ಷಾ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅಶ್ವಿನ್ ಹಾಸನ್, ಚೇತನ್ ದುರ್ಗಾ, ವರ್ಧನ್ ತೀರ್ಥಹಳ್ಳಿ, ಯಶ್ ಶೆಟ್ಟಿ, ರಘು ಶಿವಮೊಗ್ಗ, ವಜರಂಗ ಶೆಟ್ಟಿ, ಪದ್ಮಿನಿ, ರಾಹುಲ್,ರೋಷನ್, ರಜನಿ, ವಿಕ್ಕಿ, ಯಶಾ ಸೇರಿದಂತೆ ಒಂದಷ್ಟು ತಾರಾಗಣ ಸಿನಿಮಾದಲ್ಲಿದೆ.

ಸೈಕಾಲಾಜಿಕಲ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ 'ರೂಮ್ ಬಾಯ್' ಸಿನಿಮಾಕ್ಕೆ ರೋಣದ ಬಕ್ಕೇಶ್ ಸಂಗೀತ ನೀಡಿದ್ದು, ಧನಪಾಲ್ ನಾಯಕ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿ ಹಿರಿಯ ಸಿನಿಮಾ ಪತ್ರಕರ್ತ ವಿಜಯ್ ಭರಮಸಾಗರ್ ಕೆಲಸ ನಿರ್ವಹಿಸಿದ್ದು, ಐ ಕಾನ್ ಪ್ರೊಡಕ್ಷನ್ ಅಡಿ ಲಿಖಿತ್ ಸೂರ್ಯ ಸಿನಿಮಾಗೆ ಹಣ ಹಾಕಿದ್ದಾರೆ. ಸದ್ಯಕ್ಕೆ ಶೂಟಿಂಗ್ ಮುಗಿಸಿ ಏಪ್ರಿಲ್ ಅಥವಾ ಮೇನಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

ABOUT THE AUTHOR

...view details