ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಅಭಿನಯದ 'ರೋಬೋ' ಸಿನಿಮಾ ಹಾಗೂ ಆ ಚಿತ್ರದ ಹಾಡುಗಳು ಬಹಳ ಹಿಟ್ ಆಗಿತ್ತು. 2010 ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಕನ್ನಡದಲ್ಲಿ ಡಬ್ಬಿಂಗ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.
ಸೂಪರ್ ಸ್ಟಾರ್ ಅಭಿನಯದ 'ರೋಬೋ' ಕನ್ನಡ ಡಬ್ಬಿಂಗ್ ಕಿರುತೆರೆಯಲ್ಲಿ ಪ್ರಸಾರ - S Shankar direction Robo
ಕಲಾನಿಧಿ ಮಾರನ್ ನಿರ್ಮಾಣದಲ್ಲಿ ಎಸ್. ಶಂಕರ್ ನಿರ್ದೇಶನದ 'ರೋಬೋ' ಸಿನಿಮಾ ಕನ್ನಡಕ್ಕೆ 'ಬೊಂಬಾಟ್ ರೋಬೋ' ಹೆಸರಿನಲ್ಲಿ ಡಬ್ ಆಗಿದ್ದು ಸೆಪ್ಟೆಂಬರ್ 19 ರಂದು ಉದಯ ಟಿವಿಯಲ್ಲಿ ಸಂಜೆ 6.30ಕ್ಕೆ ಪ್ರಸಾವಾಗಲಿದೆ.
ಕನ್ನಡ ಡಬ್ಬಿಂಗ್ಗೆ 'ಬೊಂಬಾಟ್ ರೋಬೋ' ಎಂದು ಹೆಸರಿಡಲಾಗಿದೆ. ಸೆಪ್ಟೆಂಬರ್ 19 ಶನಿವಾರ ಸಂಜೆ 6.30ಕ್ಕೆ ಈ 'ರೋಬೋ' ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಬೊಂಬಾಟ್ ರೋಬೋ ಸೈನ್ಸ್ ಫಿಕ್ಷನ್ , ಆ್ಯಕ್ಷನ್ ಸಿನಿಮಾವಾಗಿದ್ದು ಈ ಚಿತ್ರಕ್ಕೆ ಎಸ್. ಶಂಕರ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಇದು 'ಎಂದಿರನ್ ' ಫ್ರಾಂಚೈಸ್ನ ಮೊದಲ ಕಂತು. ಈ ಚಿತ್ರದಲ್ಲಿ ರಜನಿಕಾಂತ್, ಐಶ್ವರ್ಯ ರೈ ಬಚ್ಚನ್, ಡ್ಯಾನಿ ಡೆನ್ಜೊಗ್ಪಾ, ಸಂತಾನಮ್, ಕರುಣಾಸ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಚಿಟ್ಟಿ ಎಂಬ ರೋಬೋಟನ್ನು ತಯಾರಿಸುವ ವಿಜ್ಞಾನಿ ವಶೀಕರನ್ ಅದರಲ್ಲಿ ಮನುಷ್ಯನ ಭಾವನೆಗಳನ್ನೂ ತುಂಬುತ್ತಾನೆ. ಇದರಿಂದ ಆತ ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಾನೆ. ಆ ಸಮಸ್ಯೆಗಳಿಗೆ ಹೇಗೆ ಹೊರಬರುತ್ತಾನೆ ಎಂಬುದೇ ಚಿತ್ರದ ಕಥೆ.