ಕರ್ನಾಟಕ

karnataka

ETV Bharat / sitara

ವೀಕೆಂಡ್ ವಿತ್​​ ರಮೇಶ್ ಮರು ಪ್ರಸಾರ: ಈ ವಾರ ದರ್ಶನ್ ಹಾಗೂ ಜಗ್ಗೇಶ್ ಎಪಿಸೋಡ್ - ನಟ ರಮೇಶ್ ಅರವಿಂದ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನವರಸನಾಯಕ ಜಗ್ಗೇಶ್ ಜೊತೆಗೆ ಹಿಂದೆ ಪ್ರಸಾರವಾಗಿದ್ದ ವೀಕೆಂಡ್ ವಿತ್​​​ ರಮೇಶ್ ಕಾರ್ಯಕ್ರಮ ಮತ್ತೆ ಈ ವಾರ ಮರುಪ್ರಸಾರವಾಗಲಿದೆ.

ramesh

By

Published : Apr 9, 2020, 2:21 PM IST

Updated : Apr 9, 2020, 3:45 PM IST

ವೀಕೆಂಡ್ ವಿತ್​​ ರಮೇಶ್ ಮರುಪ್ರಸಾರ ಕಾರ್ಯಕ್ರಮದಲ್ಲಿ ಶನಿವಾರ ಮತ್ತು ಭಾನುವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನವರಸ ನಾಯಕ ಜಗ್ಗೇಶ್ ಅವರ ಎಪಿಸೋಡ್ ಪ್ರಸಾರವಾಗಲಿದೆ.

ಕನ್ನಡದ ಖಾಸಗಿ ವಾಹಿನಿಗಳು ಇದೀಗ ಮತ್ತೆ ತನ್ನ ಜನಪ್ರಿಯ ಕಾರ್ಯಕ್ರಮಗಳ ಮರು ಪ್ರಸಾರ ಆರಂಭಿಸಿವೆ. ಅದರಲ್ಲೂ ಹೆಚ್ಚಿನ ಟಿಆರ್​ಪಿ ಪಡೆದ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿ ಪ್ರಸಾರ ಮಾಡಲು ಮುಂದಾಗಿವೆ.

ನಟ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ವೀಕೆಂಡ್​ ವಿತ್​​ ರಮೇಶ್ ಕಾರ್ಯಕ್ರಮ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.‌ ಪ್ರತಿ ವಾರ ಹೊಸ ಅತಿಥಿಯೊಂದಿಗೆ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ವೀಕ್ಷಿಸಲು ಪ್ರೇಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದರು. ತಮ್ಮ ಮೆಚ್ಚಿನ ತಾರೆಯರನ್ನು ಕರೆತರುವಂತೆ ಬೇಡಿಕೆ ಇಡುತ್ತಿದ್ದರು.

ಇದೀಗ ಸೀಸನ್ ಮುಗಿದೆ. ಕೊರೊನಾ‌ ವೈರಸ್​ನಿಂದ ಯಾವುದೇ ಶೂಟಿಂಗ್ ನಡೆಯುತ್ತಿಲ್ಲ. ಹಳೆಯ ಕಾರ್ಯಕ್ರಮಗಳನ್ನೇ ಎಲ್ಲಾ ವಾಹಿನಿಗಳೂ ಪ್ರಸಾರ ಮಾಡುತ್ತಿವೆ. ಅದೇ ರೀತಿ ಜೀ ಕನ್ನಡ ಕೂಡಾ ತನ್ನ ಜನಪ್ರಿಯ ಕಾರ್ಯಕ್ರಮಗಳನ್ನು ಮರಳಿ ಪ್ರಸಾರ ಮಾಡುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನವರಸನಾಯಕ ಜಗ್ಗೇಶ್ ಜೊತೆಗೆ ಹಿಂದೆ ಪ್ರಸಾರವಾಗಿದ್ದ ವೀಕೆಂಡ್ ವಿತ್​​ ರಮೇಶ್ ಕಾರ್ಯಕ್ರಮ ಮತ್ತೆ ಈ ವಾರ ಮರುಪ್ರಸಾರವಾಗಲಿದೆ. ಹಿಂದೆ ದರ್ಶನ್ ಭಾಗವಹಿಸಿದ್ದ ವೀಕೆಂಡ್ ವಿತ್​​​ ರಮೇಶ್ ಕಾರ್ಯಕ್ರಮ ದಾಖಲೆಯ ಟಿಆರ್​ಪಿ ಪಡೆದಿತ್ತು. ಅದೇ ರೀತಿ ಜಗ್ಗೇಶ್ ಭಾಗವಹಿಸಿದ್ದ ಎಪಿಸೋಡ್​ಗೂ ಉತ್ತಮ ವೀಕ್ಷಣೆ ಬಂದಿತ್ತು. ಹೀಗಾಗಿ ಈ ಶನಿವಾರ ಮತ್ತು ಭಾನುವಾರ ಈ ಎರಡು ಎಪಿಸೋಡ್​ಗಳನ್ನು ಜೀ ವಾಹಿನಿ ಮತ್ತೆ ಪ್ರಸಾರ ಮಾಡಲಿದೆ.

Last Updated : Apr 9, 2020, 3:45 PM IST

ABOUT THE AUTHOR

...view details